ಕಾರಿನಲ್ಲಿ ಬಂದ ಮುಸುಕುಧಾರಿಗಳಿಂದ ಶಿವಮೊಗ್ಗದಲ್ಲಿ ಸಹೋದರರ ಮೇಲೆ ದಾಳಿ, ಗಾಂಭೀರ ಗಾಯ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

147011183 1327318294296254 3834645892722110036 o.jpg? nc cat=105&ccb=3& nc sid=8bfeb9& nc ohc=ZNUWIDTXgPcAX9FSFBC& nc ht=scontent.fixe1 2

ಶಿವಮೊಗ್ಗ ಲೈವ್.ಕಾಂ | SHIMOGA NEWS | 16 FEBRUARY 2021

ಕಾರಿನಲ್ಲಿ ಬಂದ ಮುಸುಕುಧಾರಿಗಳು ಮನೆಯೊಳಗೆ ನುಗ್ಗಿ ಸಹೋದರರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಸಹೋದರರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಟಿಪ್ಪು ನಗರದ ಏಳನೆ ಅಡ್ಡರಸ್ತೆಯಲ್ಲಿರುವ ಮನೆಯೊಂದರ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದರು. ಸಯ್ಯದ್ ಇಮ್ರಾನ್ (45) ಮತ್ತು ಸಯ್ಯದ್ ಸಾದಿಕ್ (40) ಎಂಬುವವರ ಮೇಲೆ ಹಲ್ಲೆ ಮಾಡಲಾಗಿದೆ.

ಹೇಗಾಯ್ತು ಘಟನೆ?

ಇವತ್ತು ಮಧ್ಯಾಹ್ನ ಟಿಪ್ಪು ನಗರಕ್ಕೆ ಕಾರಿನಲ್ಲಿ ಬಂದ ಮುಸುಕುಧಾರಿಗಳು ದಾಳಿ ನಡೆಸಿದ್ದಾರೆ. ನಾಲ್ಕೈದು ಯುವಕರು ಈ ಗುಂಪಿನಲ್ಲಿದ್ದರು. ಏಕಾಏಕಿ ದಾಳಿ ನಡೆಸಿ, ಸಯ್ಯದ್ ಇಮ್ರಾನ್‍ನ ಕೈಗಳಿಗೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಇನ್ನು ಸಾದಿಕ್‍ನ ಬೆರಳು, ಕಿವಿ ಭಾಗಕ್ಕೆ ಗಾಯವಾಗಿದೆ.

ಹಲ್ಲೆಗೆ ಕಾರಣವೇನು?

ಎರಡು ದಿನದ ಹಿಂದೆ ಸಯ್ಯದ್ ಇಮ್ರಾನ್ ತುಂಗಾ ನಗರ ಠಾಣೆಯಲ್ಲಿ ದೂರು ನೀಡಿದ್ದರು. ಈ ಸಂಬಂಧ ದಾಳಿಯಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ರೌಡಿ ಶೀಟರ್ ಬಚ್ಚನ್ ಹೆಸರಿನಲ್ಲಿ ಕೆಲವು ಯುವಕರು ಇಮ್ರಾನ್ ಬಳಿ ಹಣಕ್ಕೆ ಪೀಡಿಸುತ್ತಿದ್ದರು ಎಂದು ಆರೋಪಿಸಿ ದೂರು ನೀಡಲಾಗಿದೆ. ಇದೇ ಜಿದ್ದಿನಲ್ಲಿ ಇಮ್ರಾನ್ ಮತ್ತು ಆತನ ಸಹೋದರರ ಮೇಲೆ ದಾಳಿಯಾಗಿರುವ ಸಾದ್ಯತೆ ಎಂದು ಪೊಲೀಸರು ತಿಳಿಸಿದ್ದಾರೆ.

ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇನ್ನು, ಆಸ್ಪತ್ರೆಗೆ ದಾಖಲಾಗಿರುವ ಇಮ್ರಾನ್ ಮತ್ತು ಸಾದಿಕ್ ಚೇತರಿಸಿಕೊಳ್ಳುತ್ತಿದ್ದಾರೆ.

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment