ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 20 MARCH 2021
ದಕ್ಷಿಣ ಭಾರತದ ಮೊದಲ ರೈತ ಮಹಾ ಪಂಚಾಯತ್‍ಗೆ ಭಾರತೀಯ ಕಿಸಾನ್ ಯೂನಿಯನ್ ನಾಯಕರು ಚಾಲನೆ ನೀಡಿದರು. ಭತ್ತದ ಕಸೂತಿ ತೋರಣವನ್ನು ಅನಾವರಣಗೊಳಿಸುವ ಮೂಲಕ ಮಹಾ ಪಂಚಾಯತ್ ಉದ್ಘಾಟಿಸಿದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ನವದೆಹಲಿಯಲ್ಲಿ ಹೋರಾಟ ನಡೆಸುತ್ತಿರುವ ರೈತ ಚಳವಳಿಯ ನೇತೃತ್ವ ವಹಿಸಿಕೊಂಡಿರುವ ರಾಕೇಶ್ ಟಿಕಾಯತ್, ಯುದ್ದವೀರ ಸಿಂಗ್ ಮತ್ತು ಡಾ. ದರ್ಶನ್ ಪಾಲ್ ಅವರು ಮಹಾ ಪಂಚಾಯತ್‍ನಲ್ಲಿ ಭಾಗವಹಿಸಿದ್ದರು.
ಬಡವರ ರೊಟ್ಟಿ ತಿಜೋರಿಗೆ
ಸಮಾವೇಶದಲ್ಲಿ ಮಾತನಾಡಿದ ರಾಕೇಶ್ ಟಿಕಾಯತ್ ಅವರು, ಬಡವರ ರೊಟ್ಟಿಯನ್ನು ತಿಜೋರಿಯಲ್ಲಿ ಲಾಕ್ ಮಾಡಿ ಇಡಲು ಬಂಡವಾಳಶಾಹಿಗಳು ಯೋಜಿಸುತ್ತಿದ್ದಾರೆ. ಅದಕ್ಕಾಗಿಯೇ ರೈತ ವಿರೋಧಿ ಕಾನೂನುಗಳನ್ನು ಜಾರಿಗೊಳಿಸಿದ್ದಾರೆ. ಹಾಗಾಗಿ ದೆಹಲಿಯ ಗಡಿಯಲ್ಲಿ ನಡೆಯುತ್ತಿರುವ ಹೋರಾಟದ ಮಾದರಿಯಲ್ಲಿ ದೇಶಾದ್ಯಂತ ಹೋರಾಟ ಮಾಡಬೇಕು. ಕರ್ನಾಟಕದ ರೈತರು ಬೆಂಗಳೂರನ್ನೆ ದೆಹಲಿ ಮಾಡಿಕೊಳ್ಳಬೇಕು. ಬೆಂಗಳೂರಿನ ಗಡಿಯನ್ನು ಬಂದ್ ಮಾಡಿ ಹೋರಾಟ ಮಾಡಿ ಸರ್ಕಾರಕ್ಕೆ ಎಚ್ಚರಿಕೆ ನೀಡಬೇಕು. ಈ ಹೋರಾಟದಲ್ಲಿ ಯುವ ಸಮುದಾಯ ಹೆಚ್ಚಾಗಿ ತೊಡಗಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ದಕ್ಷಿಣ ರೈತರು ಏನು ಮಾಡುತ್ತಿದ್ದಾರೆ?
ಡಾ. ದರ್ಶನ್ ಪಾಲ್ ಮಾತನಾಡಿ, ಉತ್ತರ ಭಾರತದಲ್ಲಿ ಹೋರಾಟ ನಡೆಸುತ್ತಿರುವ ರೈತರು, ದಕ್ಷಿಣ ಭಾರತದ ರೈತರು ನಮ್ಮ ಬೆಂಬಲಕ್ಕಿದ್ದಾರೆಯೇ ಎಂದು ಯೋಚಿಸುತ್ತಿದ್ದರು. ಮಹಾ ಪಂಚಾಯತ್ ಮೂಲಕ ನಿಮ್ಮ ಬೆಂಬಲವನ್ನು ಸೂಚಿಸಿದ್ದೀರ. ಸ್ವಾತಂತ್ರ್ಯ ನಂತರ ಇದು ರೈತರ ದೊಡ್ಡ ಚಳವಳಿಯಾಗಿದೆ. ದೆಹಲಿಯ ಹೋರಾಟದ ಕಿಚ್ಚು ದೇಶಾದ್ಯಂತ ವ್ಯಾಪಿಸಿದೆ. ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯದೆ ಇದ್ದರೆ ರೈತರ ಆಕ್ರೋಶದ ಜ್ವಾಲೆಯಲ್ಲಿ ಮೋದಿ ಸರ್ಕಾರ ಸುಟ್ಟು ಹೋಗಲಿದೆ ಎಂದರು.
ವಿವಿಧ ಜಿಲ್ಲೆಯಿಂದ ರೈತರು
ಮಹಾ ಪಂಚಾಯತ್‍ನಲ್ಲಿ ಭಾಗವಹಿಸಲು ಶಿವಮೊಗ್ಗ ಜಿಲ್ಲೆ ಸೇರಿದಂತೆ ವಿವಿಧೆಡೆಯಿಂದ ರೈತರು ಆಗಮಿಸಿದ್ದರು. ಬಂದಿದ್ದ ರೈತರಿಗೆ ಪ್ರತಿಯೊಬ್ಬರಿಗೂ ನೀರಿನ ಬಾಟಲಿಯ ವ್ಯವಸ್ಥೆ ಮಾಡಲಾಗಿತ್ತು. ಮಜ್ಜಿಗೆ, ಹಣ್ಣು ಮತ್ತು ಮಂಡಕ್ಕಿ ಪೂರೈಸಾಯಿತು.
ಶೋಭಾ ಸುಂದರೇಶ್ ಅಧ್ಯಕ್ಷತೆ ವಹಿಸಿದ್ದರು. ರೈತ ಮುಖಂಡರಾದ ಕೆ.ಟಿ.ಗಂಗಾಧರ್, ಹೆಚ್.ಆರ್.ಬಸವರಾಜಪ್ಪ, ಚುಕ್ಕಿ ನಂಜುಂಡಸ್ವಾಮಿ, ವಿವಿಧ ಪಕ್ಷಗಳು ಮತ್ತು ಸಂಘಟನೆಗಳ ಪ್ರಮುಖರು ಮಹಾ ಪಂಚಾಯತ್‍ನಲ್ಲಿ ಭಾಗವಹಿಸಿದ್ದರು.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]