ಶಿವಮೊಗ್ಗ ಲೈವ್.ಕಾಂ | SHIMOGA NEWS | 13 APRIL 2021
ನರೇಂದ್ರ ಮೋದಿ ವಿಚಾರ ಮಂಚ್ ವತಿಯಿಂದ ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿ ಕೈದಿಗಳೊಂದಿಗೆ ಯುಗಾದಿ ಹಬ್ಬ ಆಚರಿಸಲಾಯಿತು. ಕೈದಿಗಳಿಗೆ ಬೇವು, ಬೆಲ್ಲ ವಿತರಿಸಿ, ಶುಭಾಶಯ ತಿಳಿಸಲಾಯಿತು. ಸುದ್ದಿಯ ಮುಂದಿನ 6 ಪ್ಯಾರಾಗಳು ಕೆಳಗಿವೆ.
ನಲಿ ನಲಿಯುತ ಯುಗಾದಿ ಆಚರಣೆ
ಕೈದಿಗಳು ಯುಗಾದಿ ಹಬ್ಬವನ್ನು ಸಡಗರದಿಂದ ಆಚರಿಸಿದರು. ಯುಗಾದಿ ಸಂಬಂಧ ಹಾಡುಗಳನ್ನು ಹೇಳಿ, ಸಂಭ್ರಮಿಸಿದರು. ಬಳಿಕ ನರೇಂದ್ರ ಮೋದಿ ವಿಚಾರ ಮಂಚ್ನ ವತಿಯಿಂದ ಕೈದಿಗಳಿಗೆ ಬೇವು, ಬೆಲ್ಲ ವಿತರಿಸಲಾಯಿತು.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಯುಗಾದಿ ಚಂದ್ರ ದರ್ಶನ, ಬೇವು, ಬೆಲ್ಲ ಹಂಚಿ ಶುಭಾಶಯ ವಿನಿಮಯ
ಈ ವೇಳೆ ಮಾತನಾಡಿದ ನರೇಂದ್ರ ಮೋದಿ ವಿಚಾರ ಮಂಚ್ನ ರಾಜಾಧ್ಯಕ್ಷ ಬಳ್ಳೆಕರೆ ಸಂತೋಷ್, ಕೈದಿಗಳು ಕುಟುಂಬದಿಂದ ದೂರಾಗಿ, ಇಲ್ಲಿ ಬಂಧಿಯಾಗಿರುತ್ತಾರೆ. ಅವರಲ್ಲಿ ಆತ್ಮವಿಶ್ವಾಸ ತುಂಬಿ, ಆರೋಪ ಮುಕ್ತರಾಗಲಿ ಎಂದು ಹಾರೈಸುತ್ತ ಬೇವು ಬೆಲ್ಲ ಹಂಚಿದ್ದೇವೆ. ಹೊಸ ವರ್ಷ ಅವರ ಬಾಳಲ್ಲಿ ಹೊಸ ಹುರುಪು ನೀಡಲಿ ಎಂದು ಈ ಕಾರ್ಯ ಕೈಗೊಂಡಿದ್ದೇವೆ ಎಂದು ತಿಳಿಸಿದರು.
ನರೇಂದ್ರ ಮೋದಿ ವಿಚಾರ ಮಂಚ್ನ ಜಿಲ್ಲಾಧ್ಯಕ್ಷ ಶರತ್ ಕಲ್ಯಾಣಿ, ಬಜರಂಗದಳ ಮುಖಂಡ ದೀನದಯಾಳು, ಜೈಲರ್ ಶಿವಾನಂದ ಶಿವಪೂರಿ, ಜೈಲರ್ ಅನಿಲ್, ಸಿಬ್ಬಂದಿಗಳು ಉಪಸ್ಥಿತರಿದ್ದರು.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com