ರಿಪ್ಪನ್​ಪೇಟೆ ಸುತ್ತಮುತ್ತ ಆಲಿಕಲ್ಲು ಮಳೆ, ಮರ ಬಿದ್ದು ಹೆದ್ದಾರಿ ತಾತ್ಕಾಲಿಕ ಬಂದ್

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | RIPPONPETE NEWS | 20 APRIL 2021

ರಿಪ್ಪನ್‍ಪೇಟೆ ಸುತ್ತಮುತ್ತ ಇವತ್ತು ಆಲಿಕಲ್ಲು ಮಳೆಯಾಗಿದೆ. ಜೋರು ಮಳೆ ಮತ್ತು ಗಾಳಿಯ ರಭಸಕ್ಕೆ ವಿವಿಧೆಡೆ ಮನೆ ಮತ್ತು ವಾಹನಗಳಿಗೆ ಹಾನಿಯಾಗಿದೆ.

Covid 19 Vaccination Kan poster 1 1

ಇಲ್ಲಿನ ಸಾಗರ ರಸ್ತೆಯ ಪದವಿ ಪೂರ್ವ ಕಾಲೇಜು ಸಮೀಪ ಮರ ಬುಡಮೇಲಾಗಿದೆ. ರಸ್ತೆಗೆ ಅಡ್ಡಲಾಗಿ ಮರ ಬಿದ್ದಿದೆ. ಇದರಿಂದ ತೀರ್ಥಹಳ್ಳಿ – ಸಾಗರ ಹೆದ್ದಾರಿ ತಾತ್ಕಾಲಿಕವಾಗಿ ಬಂದ್ ಆಗಿದೆ.

ಮರ ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ಅಲ್ಲಿಯವರೆಗೆ ಈ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಮರ ಉರುಳಿ ಬಿದ್ದಿರುವುದರಿಂದ ಕಾರು, ಗೂಡ್ಸ್ ಆಟೋ, ಬೈಕ್ ಮತ್ತು ಕೆಲವು ಕಟ್ಟಡಗಳಿಗೆ ಹಾನಿಯಾಗಿದೆ.

ಗಾಳಿ, ಮಳೆಯಿಂದಾಗಿ ರಿಪ್ಪನ್‍ಪೇಟೆ ಸುತ್ತಮುತ್ತ ಹಲವು ಮನೆಗಳಿಗೆ ಹಾನಿಯಾಗಿರುವುದಾಗಿ ತಿಳಿದು ಬಂದಿದೆ.

ಅತ್ತ ಆನಂದಪುರ ಸಮೀಪದ ಗೌತಮಪುರದಲ್ಲಿ ಸಿಡಲು ಬಡಿದು ತೆಂಗಿನ ಮರವೊಂದಕ್ಕೆ ಬೆಂಕಿ ಹೊತ್ತಿದೆ. ಸ್ಥಳೀಯರು ಇದನ್ನು ಗಮನಿಸಿ ಕೂಡಲೆ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.

ವಿಡಿಯೋ ವರದಿ ಇಲ್ಲಿದೆ

ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಮೇಲ್ shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment