ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ ಲೈವ್.ಕಾಂ | SHIMOGA NEWS | 24 APRIL 2021
ವೀಕೆಂಡ್ ಕರ್ಫ್ಯೂ ವೇಳೆ ಅನಗತ್ಯವಾಗಿ ರಸ್ತೆಗಿಳಿಯುವವರಿಗೆ ಪೊಲೀಸರು ಬಿಸಿ ಮುಟ್ಟಿಸುತ್ತಿದ್ದಾರೆ. ಶಿವಮೊಗ್ಗದ ವಿವಿಧೆಡೆ ಪೊಲೀಸರು ದಂಡ ಪ್ರಯೋಗ ಆರಂಭಿಸಿದ್ದಾರೆ.

ಶಿವಮೊಗ್ಗದ ನಗರದಾದ್ಯಂತ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿದ್ದಾರೆ. ರಸ್ತೆಯಲ್ಲಿ ಸಂಚರಿಸುವ ವಾಹನಗಳನ್ನು ತಡೆದು ವಿಚಾರಿಸುತ್ತಿದ್ದಾರೆ. ಅನಗತ್ಯವಾಗಿ ಓಡಾಡುತ್ತಿರುವವರಿಗೆ ದಂಡ ಹಾಕಲಾಗುತ್ತಿದೆ.
ಯಾವೆಲ್ಲ ಕಾರಣ ಹೇಳುತ್ತಿದ್ದಾರೆ?
ಪೊಲೀಸರು ವಾಹನ ತಡೆದಾಗ ಜನರು ಒಂದಿಲ್ಲೊಂದು ಕಾರಣ ಹೇಳುತ್ತಿದ್ದಾರೆ. ಹಲವರದ್ದು ನೈಜ ಕಾರಣವಿದ್ದರೆ, ಅನೇಕ ಮಂದಿಯದ್ದು ಕುಂಟು ನೆಪವಾಗಿದೆ.
ಆಸ್ಪತ್ರೆಗೆ ತೆರಳಬೇಕು, ಮೆಡಿಕಲ್ ಶಾಪ್ಗೆ ಹೋಗಬೇಕಿದೆ ಅನ್ನುವುದು ಸಾಮಾನ್ಯ ಕಾರಣವಾಗಿದೆ. ಮದುವೆ ಇದೆ, ಸಂಬಂಧಿಯೊಬ್ಬರ ಸಾವು ಸಂಭವಿಸಿದೆ ಎಂದು ಹೇಳಿ ಹೋಗುತ್ತಿರುವವರು ಇದ್ದಾರೆ. ಕಚೇರಿಗೆ ತೆರಳಿದ್ದೆವು, ಅಂಗಡಿ ಬಾಗಿಲು ಹಾಕಿ ಈಗ ಬರುತ್ತಿದ್ದೇವೆ ಎಂದು ಹೇಳುವವರಿದ್ದಾರೆ.
ನೈಜ ಕಾರಣವಾಗಿದ್ದರೆ ಪೊಲೀಸರು ವಾಹನವನ್ನು ಬಿಟ್ಟು ಕಳುಹಿಸುತ್ತಿದ್ದಾರೆ. ಕುಂಟು ನೆಪ ಹೇಳುತ್ತ ಓಡಾಡುತ್ತಿರುವವರನ್ನು ತಡೆದು, ಪೊಲೀಸರು ದಂಡ ಹಾಕುತ್ತಿದ್ದಾರೆ.
ದಂಡ ಹಾಕುತ್ತಿರುವ ವಿಡಿಯೋ ನ್ಯೂಸ್
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com
LATEST NEWS
- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

- ಬೆಟ್ಟೆ, ರಾಶಿ ರೇಟ್ ಇವತ್ತು ಎಷ್ಟಿದೆ? ಸರಕು ದರ ಮತ್ತೆ ಹೆಚ್ಚಾಯ್ತಾ? – 3 ಮಾರ್ಚ್ 2026

- ಶಿವಮೊಗ್ಗದಲ್ಲಿ ರಂಗ ಹಬ್ಬ, ನಾಲ್ಕು ದಿನ ನಾಟಕೋತ್ಸವ, ಯಾವ್ಯಾವ ದಿನ ಯಾವ ನಾಟಕವಿದೆ?

- ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ವ್ಯಕ್ತಿಗೆ ಬಿಸಿ ಮುಟ್ಟಿಸಿದ ಅಕ್ಕ ಪಡೆ, ಆಗಿದ್ದೇನು?

- ದುರ್ಗಿಗುಡಿಯಲ್ಲಿ ವೈಭವದ ರಥೋತ್ಸವ, ಈ ಬಾರಿ ಉತ್ಸವ ಬೆಳಗ್ಗೆ ನಡೆದಿದ್ದೇಕೆ?

About The Editor
ನಿತಿನ್ ಆರ್.ಕೈದೊಟ್ಲು






