ಶಿವಮೊಗ್ಗದಲ್ಲಿ ವಾಹನ ತಪಾಸಣೆ ವೇಳೆ ಪೊಲೀಸರ ಮುಂದೆ ಕರೋನ ಸೋಂಕಿತ ಪ್ರತ್ಯಕ್ಷ, ಖಾಕಿ ಪಡೆ ಗಲಿಬಿಲಿ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

Covid 19 Vaccination Kan poster 1 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 25 APRIL 2021

ವೀಕೆಂಡ್ ಕರ್ಫ್ಯೂ ಸಂದರ್ಭ ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸರ ಮುಂದೆ ಕೋವಿಡ್ ಸೋಂಕಿತನೊಬ್ಬ  ಪ್ರತ್ಯಕ್ಷನಾಗಿ ಬೆಚ್ಚಿಬೀಳಿಸಿದ್ದಾನೆ. ಶಿವಮೊಗ್ಗದ ಅಮೀರ್ ಅಹಮದ್ ಸರ್ಕಲ್‍ನಲ್ಲಿ ಘಟನೆ ಸಂಭವಿಸಿದೆ.

ಹೇಗಾಯ್ತು ಘಟನೆ?

ಅಮೀರ್ ಅಹಮದ್ ಸರ್ಕಲ್‍ನಲ್ಲಿ ಬೆಳಗ್ಗೆಯಿಂದಲೂ ಟ್ರಾಫಿಕ್ ಪೊಲೀಸರು ವಾಹನಗಳನ್ನು ತಡೆದು ತಪಾಸಣೆ ನಡೆಸುತ್ತಿದ್ದರು. ಮಧ್ಯಾಹ್ನದ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ವ್ಯಕ್ತಿಯೊಬ್ಬನನ್ನು ಅಡ್ಡಗಟ್ಟಿ ಪ್ರಶ್ನಿಸಿದಾಗ, ನಾನು ಕೋವಿಡ್ ಪೇಷೆಂಟ್ ಅಂತಾ ಹೇಳಿ, ಸುತ್ತಲು ಇದ್ದವರನ್ನು ಬೆಚ್ಚಿ ಬೀಳಿಸಿದ.

ದಾಖಲೆಗಳ ಪರಿಶೀಲನೆ ವೇಳೆ ಕೋವಿಡ್ ಪಾಸಿಟಿವ್ ದಾಖಲೆ ಪ್ರದರ್ಶಿಸಿದ. ಇದನ್ನು ಕಂಡು ದಂಗಾದ ಪೊಲೀಸರು, ಪಾಸಿಟಿವ್ ಇದ್ದವರು ರಸ್ತೆಯಲ್ಲೇಕೆ ಓಡಾಡ್ತಿದ್ದೀರ ಎಂದು ಪ್ರಶ್ನಿಸಿದರು. ಈಗ ಆಸ್ಪತ್ರೆಯಿಂದ ಬರುತ್ತಿದ್ದೇನೆ ಎಂದು ಸೋಂಕಿತ ಉತ್ತರಿಸಿದ. ಸುತ್ತಲು ಇದ್ದ ಪೊಲೀಸರು, ವಾಹನಗಳ ದಾಖಲೆ ತೋರಿಸಲು ನಿಂತಿದ್ದವರು, ಮಾಧ್ಯಮದವರು ದಂಗಾದರು.

ಕೂಡಲೆ ಆ ಸೋಂಕಿತನನ್ನು ಮನೆಗೆ ತೆರಳುವಂತೆ ಸೂಚಿಸಿದ ಪೊಲೀಸರು, ಕಂಟ್ರೋಲ್ ರೂಂಗೆ ಮಾಹಿತಿ ನೀಡಿದರು. ಉಳಿದ ಪೊಲೀಸರನ್ನು ಅಲರ್ಟ್‍ ಮಾಡಿದರು.

ಇಲ್ಲಿದೆ ವಿಡಿಯೋ ರಿಪೋರ್ಟ್‍

ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment