ಶಿವಮೊಗ್ಗ ಲೈವ್.ಕಾಂ | SHIMOGA NEWS | 1 MAY 2021
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ಶಿವಮೊಗ್ಗದಲ್ಲಿ ಕರ್ಫ್ಯೂ ಮತ್ತಷ್ಟು ಕಠಿಣವಾಗಿದೆ. ಅನಗತ್ಯ ಓಡಾಟಕ್ಕೆ ಬ್ರೇಕ್ ಹಾಕಬೇಕು, ಕರೋನ ಸೋಂಕು ಹರಡುವುದನ್ನು ತಡೆಯಬೇಕು ಅನ್ನುವ ಉದ್ದೇಶದಿಂದ ಪೊಲೀಸರು ಬಿಗಿ ಕ್ರಮ ಕೈಗೊಂಡಿದ್ದಾರೆ.
ಶಿವಮೊಗ್ಗ ಲೈವ್.ಕಾಂ ಜೊತೆಗೆ ಮಾತನಾಡಿದ ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀ ಪ್ರಸಾದ್ ಅವರು, ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತಿನಿಂದ ಕೈಗೊಳ್ಳುತ್ತಿರುವ ಕ್ರಮಗಳ ಕುರಿತು ವಿವರಿಸಿದ್ದಾರೆ.
ಬೆಳಗ್ಗೆ ಹತ್ತೂವರೆನೇ ಲಾಸ್ಟ್
ಅಗತ್ಯ ವಸ್ತು ಖರೀದಿ, ನೌಕರರು, ಕಟ್ಟಡ ಕಾರ್ಮಿಕರ ಓಡಾಟ, ಔಷಧ, ಮಾತ್ರೆಗಳನ್ನು ಖರೀದಿಗೆ ಬೆಳಗ್ಗೆ 10 ಗಂಟೆವರೆಗೆ ಅವಕಾಶವಿದೆ. ಆ ಬಳಿಕ ಜನರೆಲ್ಲ ಮನೆ ಸೇರಲು ಅರ್ಧ ಗಂಟೆವರೆಗೆ ಕಾಲವಕಾಶ ಕೊಡಬಹುದು. ಹತ್ತೂವರೆ ಬಳಿಕ ಯಾವುದೆ ವಾಹನ ಸಂಚಾರಕ್ಕೆ ಶಿವಮೊಗ್ಗ ಜಿಲ್ಲೆಯಲ್ಲಿ ಅವಕಾಶವಿಲ್ಲ. ಕಟ್ಟುನಿಟ್ಟು ಕರ್ಪ್ಯೂ ಜಾರಿಯಲ್ಲಿರುತ್ತದೆ. ಸಂಜೆ ಐದು ಗಂಟೆ ಹೊತ್ತಿಗೆ ಎಲ್ಲರೂ ಮನೆಗೆ ಹೋಗಲು ಅರ್ಧ ಮುಕ್ಕಾಲು ಗಂಟೆಯ ಅವಕಾಶ ಕೊಡುತ್ತೇವೆ.

ವಾಹನಗಳ ಸೀಜ್ ಹೆಚ್ಚಾಗುತ್ತಿದೆ
ಅನಗತ್ಯ ಓಡಾಡುವವರಿಗೆ ಕಡಿವಾಣ ಹಾಕಲು ವಾಹನಗಳನ್ನು ಸೀಜ್ ಮಾಡುತ್ತಿದ್ದೇವೆ. ಮೊದಲಿಗೆ 40, 50 ವಾಹನಗಳು ಸೀಜ್ ಮಾಡಿದ್ದೆವು. ನಿನ್ನೆ 150 ವಾಹನ ಸೀಜ್ ಮಾಡಿದ್ದೇವೆ. ಇದೆ ಪ್ರಕಾರವಾಗಿ ಹೆಚ್ಚಳ ಮಾಡುತ್ತಾ ಹೋಗುತ್ತಿದ್ದೇವೆ.
ಲಾಠಿ ಚಾರ್ಜ್ ಬಗ್ಗೆ
ನಾವು ಎಲ್ಲಿ ಪೋರ್ಸ್ ಬಳಕೆ ಮಾಡಬೇಕೋ ಅಲ್ಲಿ ಉಪಯೋಗಿಸಬೇಕು. ಕೆಲವರು ಮನೆಯಿಂದ ಹೊರಬರುಲ ನೈಜ ಕಾರಣವಿರುತ್ತದೆ. ಇನ್ನೂ ಕೆಲವರಿಗೆ ಮನೆಗಳೆ ಇಲ್ಲ. ಅವರಿಗೆಲ್ಲ ನಾವು ಲಾಠಿ ಬಳಸಲು ಆಗುವುದಿಲ್ಲ. ಮಾತು ಕೇಳದೆ, ಉಡಾಫೆ ಮಾಡುವವರ ವಿರುದ್ಧ ಏನು ಕ್ರಮ ಕೈಗೊಳ್ಳಬೇಕೋ ಅದನ್ನು ಮಾಡಿಯೇ ಮಾಡುತ್ತೇವೆ.
LATEST NEWS
- ವರ್ಷ ಪೂರ್ತಿ ರಂಗ ಚಟುವಟಿಕೆ, ಉದ್ಘಾಟನೆಯ ದಿನಾಂಕ ಪ್ರಕಟ, ಏನಿದು ಕಾರ್ಯಕ್ರಮ?

- ಸರ್ಕಾರಿ ಮಹಿಳಾ ನೌಕರರ ಸಂಘ ಅಸ್ಥಿತ್ವಕ್ಕೆ, ಉದ್ದೇಶವೇನು? ರಾಜ್ಯಾಧ್ಯಕ್ಷೆ ಏನೆಲ್ಲ ಹೇಳಿದರು?

- ಅರ್ಧಕ್ಕರ್ಧ ಶಿವಮೊಗ್ಗ ಸಿಟಿಯಲ್ಲಿ ಫೆಬ್ರವರಿ 7ರಂದು ಇಡೀ ದಿನ ಕರೆಂಟ್ ಇರಲ್ಲ, ಯಾವ್ಯಾವ ಏರಿಯಾ? ಇಲ್ಲಿದೆ ಲಿಸ್ಟ್

- ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತಷ್ಟು ತಗ್ಗಿದ ತಪಮಾನ, ಯಾವ್ಯಾವ ತಾಲೂಕಿನಲ್ಲಿ ಎಷ್ಟಿದೆ?

- ಶಿವಮೊಗ್ಗ ಮಾರಿಕಾಂಬಾ ಜಾತ್ರೆ, ಪಂದ್ಯ ಗೆದ್ದವರಿಗೆ ಎರಡು ಟಗರು

About The Editor
ನಿತಿನ್ ಆರ್.ಕೈದೊಟ್ಲು






