ಶಿವಮೊಗ್ಗದ ರೋಡುಗಳಲ್ಲಿ ಇವತ್ತು ಪೊಲೀಸರಿಲ್ಲ, ಕಟ್ಟೆಚ್ಚರವಿಲ್ಲ, ಕರ್ಫ್ಯೂ ನಿಯಂತ್ರಿಸುತ್ತಿವೆ ಬ್ಯಾರಿಕೇಡ್​ಗಳು

ಶಿವಮೊಗ್ಗ ಲೈವ್.ಕಾಂ | SHIMOGA NEWS | 2 MAY 2021 ಸುದ್ದಿಯ ಮುಂದಿನ 10 ಪ್ಯಾರಾಗಳು ಕೆಳಗಿವೆ.

ಸರ್ಕಾರದ ಪರಿಷ್ಕೃತ ಮಾರ್ಗಸೂಚಿಯ ಬೆನ್ನಿಗೆ ಶಿವಮೊಗ್ಗದಲ್ಲಿ ಇವತ್ತಿನ ಕರ್ಪ್ಯೂ ಬ್ಯಾರಿಕೇಡ್‍ಗೆ ಸೀಮಿತವಾಗಿದೆ. ಈ ನಡುವೆ ಜನರು ಕೂಡ ಮನೆಯಿಂದ ಹೊರ ಬಾರದೆ ಇರುವುದರಿಂದ ರಸ್ತೆಗಳು ಖಾಲಿ ಖಾಲಿ ಅನಿಸುತ್ತಿವೆ.

ಶಿವಮೊಗ್ಗ ನಗರದಾದ್ಯಂತ ಪೊಲೀಸರ ಸಂಖ್ಯೆ ಸಂಪೂರ್ಣ ತಗ್ಗಿದೆ. ನಗರದ ಪ್ರಮುಖ ಕಡೆಗಳಲ್ಲಿ ಅಲ್ಲೊಬ್ಬ ಇಲ್ಲೊಬ್ಬ ಪೊಲೀಸ್ ಸಿಬ್ಬಂದಿ ಕಾಣಸಿಗುತ್ತಾರೆ. ಶನಿವಾರ ಇದ್ದಷ್ಟು ಪೊಲೀಸ್ ಸಿಬ್ಬಂದಿಯಾಗಲಿ, ಕಟ್ಟೆಚ್ಚರವಾಗಲಿ ಇಲ್ಲ.

ಎಲ್ಲೆಲ್ಲೂ ಬ್ಯಾರಿಕೇಡ್

ನಗರದಾದ್ಯಂತ ಬ್ಯಾರಿಕೇಡ್‍ಗಳನ್ನ ಹಾಕಲಾಗಿದೆ. ಗಾಂಧಿ ಬಜಾರ್‍, ಶಿವಪ್ಪನಾಯಕ ಪ್ರತಿಮೆ, ಅಮೀರ್ ಅಹಮದ್ ಸರ್ಕಲ್‍, ನೆಹರೂ ರೋಡ್, ಅಶೋಕ ಸರ್ಕಲ್, ಸಾಗರ ರಸ್ತೆ ಸೇರಿದಂತೆ ವಿವಿಧೆಡೆ ಬ್ಯಾರಿಕೇಡ್ ಹಾಕಲಾಗಿದೆ. ವಾಹನಗಳ ಸಂಚಾರ ತಡೆಯಲು ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

ರಸ್ತೆಯಲ್ಲಿ ಜನರಿಲ್ಲ, ವಾಹನ ವಿರಳ

ಭಾನುವಾರವಾದ್ದರಿಂದ ಶಿವಮೊಗ್ಗದಲ್ಲಿ ಇವತ್ತು ಜನ ಸಂಚಾರ ಸಂಪೂರ್ಣ ತಗ್ಗಿದೆ. ವಾಹನಗಳ ಸಂಖ್ಯೆಯು ಕಡಿಮೆ ಇದೆ. ಬಿಗಿ ಬಂದೋಬಸ್ತ್ ಇಲ್ಲದಿದ್ದರೂ ವಾಹನ ಸಂಚಾರವಿಲ್ಲದೆ ರಸ್ತೆಗಳು ಖಾಲಿ ಖಾಲಿಯಾಗಿವೆ.

ನೀವಿನ್ನೂ ಕರೋನ ಲಸಿಕೆ ಪಡೆದಿಲ್ಲವಾ? ಕೂಡಲೆ ಕೆಳಗಿರುವ ಫೋಟದಲ್ಲಿನ ನಂಬರ್‍ಗೆ ಕರೆ ಮಾಡಿ, ಸುರಕ್ಷಿತವಾಗಿ ಲಸಿಕೆ ಪಡೆಯಿರಿ

Covid 19 Vaccination Kan poster 1 1

ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಮೇಲ್ shivamoggalive@gmail.com

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Shivamogga Live Promotion

Leave a Comment