ಅಡಿಕೆ ತೋಟಕ್ಕೆ ನೀರು ಹಾಯಿಸಲು ಹೋದ ಮಾಲೀಕನಿಗೆ ಆಘಾತ, ದಾಖಲಾಯ್ತು ಕೇಸ್‌, ಆಗಿದ್ದೇನು?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS

ಶಿವಮೊಗ್ಗ: ತಾಲೂಕಿನ ಹೊಳಲೂರು ಗ್ರಾಮದ ಅಡಿಕೆ ತೋಟವೊಂದರಿಂದ ಬೋರ್‌ವೆಲ್ ಮೋಟಾರ್ ಹಾಗೂ ಕೇಬಲ್ ವೈಯರ್ ಕಳ್ಳತನ ಮಾಡಲಾಗಿದೆ.

➤ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ನಗರದ ಕೃಷಿ ನಗರದ ಹೆಚ್.ಇ.ಮಂಜಪ್ಪ ಅವರಿಗೆ ಸೇರಿದ ತೋಟದಲ್ಲಿ ಕಳ್ಳತನ ನಡೆದಿದೆ. ಮಂಜಪ್ಪ ಅವರು ತಮ್ಮ ಅಡಿಕೆ ತೋಟದ ಬೋರ್‌ವೆಲ್‌ಗೆ ₹20,000 ಮೌಲ್ಯದ 5 ಎಚ್.ಪಿ ಸಾಮರ್ಥ್ಯದ ಮೋಟಾರ್ ಅಳವಡಿಸಿದ್ದರು. ಇತ್ತೀಚೆಗೆ ತೋಟಕ್ಕೆ ನೀರು ಹಾಯಿಸಲು ಹೋದಾಗ ಕಳ್ಳತನ ಬೆಳಕಿಗೆ ಬಂದಿದೆ. ಬೋರ್‌ವೆಲ್ ಮೋಟಾರ್ ಹಾಗೂ ಅದಕ್ಕೆ ಸಂಪರ್ಕ ಕಲ್ಪಿಸಲಾಗಿದ್ದ ₹12,000 ಮೌಲ್ಯದ 350 ಅಡಿ ಉದ್ದದ ಕೇಬಲ್ ವೈಯರ್ ಅನ್ನು ದುಷ್ಕರ್ಮಿಗಳು ಕದ್ದು ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

Areca-Farm-Adike-tota-in-Shimoga

ಕಳ್ಳತನವಾಗಿರುವ ಒಟ್ಟು ಸ್ವತ್ತಿನ ಅಂದಾಜು ಮೌಲ್ಯ ₹32,000 ಎನ್ನಲಾಗಿದೆ. ಘಟನೆ ಸಂಬಂಧ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.