ರಾಜ್ಯಗಳಿಗೆ ಇನ್ನು ಮೂರು ದಿನದಲ್ಲಿ ಬರಲಿದೆ ಲಕ್ಷ ಲಕ್ಷ ಲಸಿಕೆ, ಈಗೆಷ್ಟು ಲಭ್ಯವಿದೆ? ಕೇಂದ್ರದಿಂದ ವರದಿ ರಿಲೀಸ್

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

NATIONAL NEWS | 8 MAY 2021

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಕೋವಿಡ್ ಲಸಿಕೆ ಸಂಬಂಧ ಕೇಂದ್ರ ಸರ್ಕಾರ ಮಹತ್ವದ ಪ್ರಕಟಣೆ ಹೊರಡಿಸಿದೆ. ಈವರೆಗೂ ಎಷ್ಟು ಲಸಿಕೆ ವಿತರಣೆ ಮಾಡಲಾಗಿದೆ, ರಾಜ್ಯಗಳ ಬಳಿ ಇನ್ನೆಷ್ಟು ಲಸಿಕೆ ಬಾಕಿ ಇದೆ ಎಂಬ ಮಾಹಿತಿಯನ್ನು ಬಿಡುಗಡೆ ಮಾಡಿದೆ.

ಶನಿವಾರ ಬೆಳಗ್ಗೆ 8 ಗಂಟೆವರೆಗಿನ ವರದಿಯನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವರದಿ ಬಿಡುಗಡೆ ಮಾಡಿದೆ.

ದೇಶಾದ್ಯಂತ ಎಲ್ಲಾ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಲ್ಲಿ ಈವರೆಗೂ 17.49 ಕೋಟಿ ಡೋಸ್‍ಗಳಷ್ಟು ಲಸಿಕೆ ವಿತರಣೆ ಮಾಡಲಾಗಿದೆ. ಪೂರೈಕೆಯಾದ ಲಸಿಕೆಗಳ ಪೈಕಿ ವ್ಯರ್ಥವಾಗಿದ್ದು ಸೇರಿದ 16,65,49,583 ಡೋಸ್ ಬಳಕೆ ಮಾಡಿಕೊಳ್ಳಲಾಗಿದೆ.

ಈಗ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 84,08,187 ಡೋಸ್‍ಗಳಷ್ಟು ಲಸಿಕೆ ಲಭ್ಯವಿದೆ. ಇನ್ನೂ ಮೂರು ದಿನದಲ್ಲಿ 53 ಲಕ್ಷ ಡೋಸ್‍ ಲಸಿಕೆ ಪೂರೈಸಲಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment