ಶಿವಮೊಗ್ಗ ಲೈವ್.ಕಾಂ | SHIMOGA NEWS | 9 MAY 2021
ಶಿವಮೊಗ್ಗ ಲೈವ್ನ ಪ್ರತಿ ಅಪ್ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್ಗಳನ್ನು ಜಾಯಿನ್ ಆಗಿ:
ಆಕ್ಸಿಜನ್ ಇಲ್ಲದೆ, ವೆಂಟಿಲೇಟರ್ ಸಿಗದೆ ಒಬ್ಬನೆ ಒಬ್ಬ ಸೋಂಕಿತ ಸಾವನ್ನಪ್ಪಲು ಬಿಡುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿ ಎರಡು ದಿನ ಕಳೆಯುವುದರಲ್ಲಿ, ಮೆಗ್ಗಾನ್ ಆಸ್ಪತ್ರೆಯಲ್ಲಿ ಸೋಂಕಿತರೊಬ್ಬರಿಗೆ ವೆಂಟಿಲೇಟರ್ ಸಿಗದೆ ಸಾವನ್ನಪ್ಪಿರುವ ಆರೋಪ ಕೇಳಿ ಬಂದಿದೆ. ಈ ಕುರಿತು ವಿಡಿಯೋ ವೈರಲ್ ಆಗಿದೆ.
ಶಿಕಾರಿಪುರದ ಆನಂದ್ (46) ಮೃತ ದುರ್ದೈವಿ. ಕರೋನ ಹಿನ್ನೆಲೆ ಶನಿವಾರ ಸಂಜೆ ಆನಂದ್ ಅವರು ಮಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಎರಡು ಗಂಟೆ ಕಾದರೂ ವೆಂಟಿಲೇಟರ್ ಸಿಗದೆ, ಒದ್ದಾಡಿ ಆನಂದ ಮೃತಟ್ಟಪಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.
ವಿಡಿಯೋ ವೈರಲ್
ಆಸ್ಪತ್ರೆಯಲ್ಲಿ ಆನಂದ್ ಅವರಿಗೆ ಜನರಲ್ ವಾರ್ಡ್ನಲ್ಲಿ ಚಿಕಿತ್ಸೆ ಕೊಡಲಾಗಿದೆ. ಅವರು ಕೆಮ್ಮುತ್ತ, ಒದ್ದಾಡುವ ವಿಡಿಯೋ ವೈರಲ್ ಆಗಿದೆ. ನರ್ಸ್ ಒಬ್ಬರು ಆನಂದ್ ಅವರಿಗೆ ಚಕಿತ್ಸೆ ನೀಡಿವುದು, ಆನಂದ್ ಅವರ ಪತ್ನಿ ದುಗುಡದಲ್ಲಿರುವುದು ವಿಡಿಯೋದಲ್ಲಿ ದಾಖಲಾಗಿದೆ.
(ವಿಡಿಯೋ ಪ್ರಕಟಿಸುವುದಿಲ್ಲ)
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com
LATEST NEWS
- ಕಾಂಗ್ರೆಸ್ನದ್ದು ‘3-C ಸರ್ಕಾರ’, ಮಿನಿಸ್ಟರ್ ರಾಜೀನಾಮೆಗೆ ಶಿವಮೊಗ್ಗದಲ್ಲಿ ಆಗ್ರಹ, ಏನಿದು ಮೂರು C?

- ಶಿವಮೊಗ್ಗ ಸಿಟಿಯ ವಿವಿಧೆಡೆ ಫೆಬ್ರವರಿ 6, 7ರಂದು ಕರೆಂಟ್ ಇರಲ್ಲ, ಎಲ್ಲೆಲ್ಲಿ? ಕಾರಣವೇನು?

- ಶಿವಮೊಗ್ಗ, ಭದ್ರಾವತಿಯಲ್ಲಿ ತುಸು ತಗ್ಗಿದ ತಾಪಮಾನ, ಉಳಿದ ತಾಲೂಕುಗಳಲ್ಲಿ ಹೇಗಿರಲಿದೆ?

- ಪೂಜಾ ಗೌಡ ನಂಬಿ ಅರ್ಧ ಕೋಟಿ ಹಣ ಕಳೆದುಕೊಂಡ ಶಿವಮೊಗ್ಗದ ಸೇಲ್ಸ್ಮನ್, ಆಗಿದ್ದೇನು?

- ಇವತ್ತು ಸಂಕಷ್ಟ ಚತುರ್ಥಿ, ಒಳ್ಳೆ ಸಮಯ ಎಷ್ಟೊತ್ತಿಗಿದೆ? – ಇಂದಿನ ಪಂಚಾಂಗ

About The Editor
ನಿತಿನ್ ಆರ್.ಕೈದೊಟ್ಲು






