ಶಿವಮೊಗ್ಗ ಲೈವ್.ಕಾಂ | SHIMOGA NEWS | 10 MAY 2021
ಇನ್ನೂರು ರುಪಾಯಿ ಚಿಕನ್ ಖರೀದಿಗೆ ಬಂದನವಿಗೆ ಐನೂರು ರೂ. ದಂಡ. ಐಡಿ ಕಾರ್ಡ್ ಇಲ್ಲದೆ ಬಂದ ಆಸ್ಪತ್ರೆ ಸಿಬ್ಬಂದಿಯ ಪೇಚಾಟ.
ಲಾಕ್ ಡೌನ್ ಮೊದಲ ದಿನ ಪೊಲೀಸರು ಅನಗತ್ಯ ಓಡಾಡುವವರಿಗೆ ಸರಿಯಾಗಿ ಬಿಸಿ ಮುಟ್ಟಿಸಿದ್ದಾರೆ. ವಾಹನಗಳನ್ನು ಸೀಜ್ ಮಾಡಿದ್ದಾರೆ. ದಂಡವನ್ನು ವಿಧಿಸಿದ್ದಾರೆ. ಈ ಮಧ್ಯೆ ಹಲವರು ಪೊಲೀಸರಿಂದ ತಪ್ಪಿಸಿಕೊಳ್ಳಲು ನಾನಾ ಕಾರಣ ಹೇಳಿದ್ದಾರೆ.
ಚಿಕನ್ ತಂದವನಿಗೆ ಫೈನ್
ಜೈಲ್ ಸರ್ಕಲ್ನಲ್ಲಿ ಪೊಲೀಸರು ತಪಾಸಣೆ ನಡೆಸುತ್ತಿದ್ದ ವೇಳೆ ಚಿಕನ್ ಖರೀದಿಸಿದವನೊಬ್ಬ ಸಿಕ್ಕಿಬಿದ್ದು ಪೇಚಾಡಿದ್ದಾನೆ. ಇನ್ನೂರು ರೂಪಾಯಿ ಕೊಟ್ಟು ಚಿಕನ್ ಖರೀದಿಕೊಂಡು ಬಂದವನು ಪೊಲೀಸರ ಬಳಿ ಸಿಕ್ಕಿಬಿದ್ದು, ಐನೂರು ರೂ. ದಂಡ ಕಟ್ಟಿದ್ದಾನೆ.
ಸುಮ್ನೆ ಬಂದಿದ್ದೆ ಸರ್
ಅಮೀರ್ ಅಹಮದ್ ಸರ್ಕಲ್ನಲ್ಲಿ ಪೊಲೀಸರು ತಪಾಸಣೆ ನಡೆಸುವುದನ್ನು ನೋಡಿಕೊಂಡು ನಿಂತಿದ್ದ ಯುವಕನಿಗೆ ಇನ್ಸ್ಪೆಕ್ಟರ್ ಬಿಸಿ ಮುಟ್ಟಿಸಿದ್ದಾರೆ. ನಡೆದು ಬಂದ ಯುವಕ, ಪೊಲೀಸರ ಕಾರ್ಯಾಚರಣೆ ಗಮನಿಸುತ್ತ ನಿಂತಿದ್ದ. ಇಲ್ಲೇನು ಮಾಡುತ್ತಿದ್ದೀಯ ಎಂದು ಪೊಲೀಸರು ಪ್ರಶ್ನಿಸಿದಾಗ. ಸುಮ್ಮನೆ ಬಂದಿದ್ದೆ ಸರ್. ಹಾಗೆ ನೋಡ್ತಾ ನಿಂತೆ ಅಂತಾ ಉತ್ತರಿಸಿದ. ಮನೆಯಲ್ಲಿರುವಂತೆ ಸೂಚಿಸಿದರೂ ಹೊರಗೆಲ್ಲ ಓಡಾಡುತ್ತಿರೋದೇಕೆ ಎಂದು ಇನ್ಸ್ಪೆಕ್ಟರ್ ಪ್ರಶ್ನಿಸಿ ಕಳುಹಿಸಿದರು.
ಶರ್ಟ್ ಮೇಲೆ ನೋಡಿ ಸರ್
ಆಸ್ಪತ್ರೆ ಸಿಬ್ಬಂದಿಯೊಬ್ಬರು ಐಡಿ ಕಾರ್ಡ್ ಇಲ್ಲದೆ ಬಂದು ಕುವೆಂಪು ರಸ್ತೆಯಲ್ಲಿ ಪೊಲೀಸರ ಕೈಗೆ ಸಿಕ್ಕಬಿದ್ದು ಪೇಚಿಗೆ ಸಿಲುಕಿದರು. ತನ್ನ ಶರ್ಟ್ ಮೇಲಿದ್ದ ಆಸ್ಪತ್ರೆಯ ಲೋಗೋ ತೋರಿಸಿ, ನಾನು ಆಸ್ಪತ್ರೆ ಸಿಬ್ಬಂದಿ ಸರ್. ಡ್ಯೂಟಿಗೆ ಟೈಮಾಯ್ತು ಎಂದು ಮನವಿ ಮಾಡಿದರು. ವಾಹನದಲ್ಲಿದ್ದ ಆಸ್ಪತ್ರೆಯ ದಾಖಲೆ ತೋರಿಸಿ ತೆರಳಿದರು.
ಇದನ್ನೂ ಓದಿ | 14 ದಿನ ಈ ಮೂವರು ಬಾಯಿಗೆ ಬೀಗ ಹಾಕಿಕೊಂಡರೆ ಲಾಕ್ ಡೌನ್ ಯಶಸ್ವಿಯಾಗುತ್ತೆ
ನಮ್ಮ ಗಂಡನನ್ನ ಪೊಲೀಸರು ಬಿಡ್ತಿಲ್ಲ
ಚನ್ನಗಿರಿ ಕೋರ್ಟ್ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರಿಬ್ಬರು ಬಸ್ ನಿಲ್ದಾಣದಿಂದ ನಡೆದುಕೊಂಡೆ ಮನೆಗೆ ಹೋಗುವಂತಾಯಿತು. ಬೆಳಗ್ಗೆ ಬಸ್ ನಿಲ್ದಾಣಕ್ಕೆ ತಮ್ಮ ಗಂಡ ಕರೆತಂದು ಬಿಟ್ಟಿದ್ದರು. ಈ ಹಿಂದೆ ಸರ್ಕಾರಿ ನೌಕರರಿಗೆ ಬಸ್ ವ್ಯವಸ್ಥೆ ಇತ್ತು. ಈಗ ಬಸ್ ಸೇವೆ ಇಲ್ಲ. ಕಾದು ನೋಡಿದರೂ ಬಸ್ ಬರಲಿಲ್ಲ. ಗಂಡ ಮನೆಗೆ ಹೋಗಿದ್ದಾರೆ. ಈಗ ತಮ್ಮನ್ನು ಕರೆದೊಯ್ಯಲು ಬರಲು ಪೊಲೀಸರು ಬಿಡ್ತಿಲ್ಲ ಎಂದು ಹೇಳಿ ನಡೆದುಕೊಂಡೆ ಮನೆ ಸೇರಿದರು.
ಇದನ್ನೂ ಓದಿ | ಲಾಕ್ ಡೌನ್ ಮೊದಲ ದಿನ, ಶಿವಮೊಗ್ಗ ನಗರದಲ್ಲಿ ಹೇಗಿತ್ತು ಪರಿಸ್ಥಿತಿ?
ಶಿವಮೊಗ್ಗ ನಗರದಾದ್ಯಂತ 31 ಚೆಕ್ ಪೋಸ್ಟ್ಗಳನ್ನು ಹಾಕಲಾಗಿದೆ. ಎಲ್ಲೆಡೆ ಪೊಲೀಸರನ್ನು ನಿಯೋಜಿಸಿ ವಿಚಾರಣೆ ನಡೆಸಲಾಗುತ್ತಿದೆ. ಆಸ್ಪತ್ರೆ, ಕರೋನ ಲಸಿಕೆ, ಫುಡ್ ಡಿಲೆವರಿ, ಬ್ಯಾಂಕ್ ಸಿಬ್ಬಂದಿಗಳು, ಸರ್ಕಾರಿ ನೌಕರರು ತಮ್ಮ ಸೇವೆಗೆ ತೆರಳಲು ಅವಕಾಶವಿತ್ತು. ಪಾಸ್ ಇಲ್ಲದೆ, ಐಡಿ ಕಾರ್ಡ್ ತರದೆ ಇದ್ದವರ ವಾಹನಗಳನ್ನು ಸೀಜ್ ಮಾಡಲಾಗಿದೆ.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com
- ಶಿವಮೊಗ್ಗದ ಒಂದು ರೈಲು ಎರಡು ದಿನ ಭಾಗಶಃ ರದ್ದು, ಕಾರಣವೇನು?
- ಅಡಿಕೆ ಧಾರಣೆ | 20 ಜನವರಿ 2025 | ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್?
- ಮೆಗ್ಗಾನ್ ಆಸ್ಪತ್ರೆ ಬಳಿ ATMನಲ್ಲಿ ಹಣ ಬಿಡಿಸಿದ ರೈತ, ಮರುದಿನ ಕಾದಿತ್ತು ಆಘಾತ, ಆಗಿದ್ದೇನು?
- ಕುವೆಂಪು ವಿವಿಯಿಂದ ಮೂವರಿಗೆ ಗೌರವ ಡಾಕ್ಟರೇಟ್, ಯಾರಿಗೆಲ್ಲ ಪ್ರದಾನ ಮಾಡಲಾಗ್ತಿದೆ?
- ಶಿವಮೊಗ್ಗ ಜಿಲ್ಲೆ, ಇವತ್ತು ಯಾವ್ಯಾವ ತಾಲೂಕಿನಲ್ಲಿ ಎಷ್ಟಿರುತ್ತೆ ತಾಪಮಾನ?
- ಮಕ್ಕಳಿಗೆ ಚಿನ್ನದ ಸರ ಹಾಕುವ ಪೋಷಕರೆ ಹುಷಾರ್, ಶಿವಮೊಗ್ಗದಲ್ಲಿ ಎರಡು ಪ್ರತ್ಯೇಕ ಕೇಸ್ ದಾಖಲು