ಶಿವಮೊಗ್ಗ ಲೈವ್.ಕಾಂ | SHIMOGA NEWS | 07 JUNE 2021
ಖಾಸಗಿಯವರಿಗೆ ಲಾಭ ಮಾಡಿಕೊಡಲು ಸರ್ಕಾರ ಲಸಿಕೆ ಕುರಿತು ಗೊಂದಲ ಸೃಷ್ಟಿಸಿರುವ ಅನುಮಾನ ಮೂಡುತ್ತಿದೆ ಎಂದು ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್ ಆರೋಪಿಸಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಬಿ.ಪ್ರಸನ್ನ ಕುಮಾರ್, ಸರ್ಕಾರ ಲಸಿಕೆ ಕೊಡುವ ವಿಚಾರದಲ್ಲಿ ಗೊಂದಲ ಸೃಷ್ಟಿಸಿತು. ಈಗ ಖಾಸಗಿಯವರಿಗೆ ಲಸಿಕೆ ಪೂರೈಕೆ ಮಾಡಿ, ಸರ್ಕಾರ ತನ್ನ ಹೊಣೆ ಮರೆತಿದೆ. ಜನರು ಸಾಲ ಮಾಡಿಕೊಂಡು ಬಂದು ಲಸಿಕೆ ಹಾಕಿಸಿಕೊಳ್ಳುವಂತಾಗಿದೆ. ಖಾಸಗಿಯವರಿಗೆ ಲಾಭ ಮಾಡಿಕೊಡಲು ಮುಂದಾಗಿದೆ ಎಂದು ಆರೋಪಿಸಿದರು.
ಲಾಕ್ಡೌನ್ ಈಶ್ವರಪ್ಪ ಅವರಿಂದ ಸಂಕಷ್ಟ
ಸಚಿವ ಈಶ್ವರಪ್ಪ ಅವರನ್ನು ಶಿವಮೊಗ್ಗದ ಜನರು ಲಾಕ್ಡೌನ್ ಈಶ್ವರಪ್ಪ ಅಂತಾ ಕರೆಯುವಂತಾಗಿದೆ. ಇವರ ಲಾಕ್ಡೌನ್ ನೀತಿಯಿಂದ ಗಾಂಧಿ ಬಜಾರ್ ಬಣಗುಡುವಂತಾಗಿದೆ ಎಂದು ಪ್ರಸನ್ನ ಕುಮಾರ್ ಆರೋಪಿಸಿದರು.
ಸಮಯ ಬದಲಾಯಿಸಿ.
ಬೆಳಗ್ಗೆ 6 ರಿಂದ 8 ಗಂಟೆವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಅಂತಾರೆ. ಆದರೆ ಅರ್ಧ ಗಂಟೆ ಮೊದಲೆ ಪೊಲೀಸರು ಲಾಠಿ ಹಿಡಿದಯ ಓಡಾಡುತ್ತಾರೆ. ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 10 ಗಂಟೆವರೆಗೆ ಅವಕಾಶ ನೀಡಬೇಕು. ಕೃಷಿ ಚಟುವಟಿಕೆಗೆ ಅಗತ್ಯ ಇರುವ ಪರಿಕರಗಳನ್ನು ಕೊಳ್ಳಲು ಬಳಗ್ಗೆ 12 ಗಂಟೆವರೆಗೆ ಅವಕಾಶ ನೀಡಬೇಕು ಎಂದರು.
ಮದುವೆಗಳಿಗೆ ಜಿಲ್ಲಾಡಳಿತ ಅವಕಾಶ ನೀಡುತ್ತದೆ. ಆದರೆ ಮದುವೆಗೆ ತಾಳಿ ಖರೀದಿಸಲು ಆಭರಣ ಮಳಿಗೆಗಳು, ಮದುಮಕ್ಕಳ ಬಟ್ಟೆ ಖರೀದಿಗೆ ಅವಕಾಶ ನೀಡದಿರುವುದು ವಿಪರ್ಯಾಸ ಎಂದು ಪ್ರಸನ್ನ ಕುಮಾರ್ ಆರೋಪಿಸಿದರು.
ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ
ಕ್ರಷರ್ಗಷ್ಟೆ ಪರ್ಮಿಷನ್ ಕೊಡಿಸುತ್ತಾರೆ
ಲಾಕ್ಡೌನ್ ಈಶ್ವರಪ್ಪ ಅವರು ಬ್ಲಾಸ್ಟ್ ಮಾಡುವ ಕ್ರಷರ್ಗಳಿಗೆ ಅನುಮತಿ ಕೊಡಿಸುತ್ತಾರೆ. ಆದರೆ ವ್ಯಾಪಾರಕ್ಕೆ ಅನುಮತಿ ಕೊಡಿಸುವ ವಿಚಾರದಲ್ಲಿ ವಿಫಲರಾಗಿದಾರೆ ಎಂದು ಪ್ರಸನ್ನ ಕುಮಾರ್ ಆರೋಪಿಸಿದರು.
ಇನ್ಮುಂದೆ ಕರೋನ ಪರೀಕ್ಷೆ ನಿಮ್ಮ ಮನೆಯಲ್ಲೇ ಆಗುತ್ತೆ. ಶಿವಮೊಗ್ಗ ನಗರ ವ್ಯಾಪ್ತಿಯ ಯಾವುದೆ ಏರಿಯಾದಿಂದ ಕರೆ ಮಾಡಿ. ಪರೀಕ್ಷೆಗೆ ನಿಮ್ಮ ಮನೆಗೆ ಬರ್ತಾರೆ ತಜ್ಞರು.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]