ಶಿವಮೊಗ್ಗ ಲೈವ್.ಕಾಂ | SHIMOGA CRIME NEWS | 14 ಜೂನ್ 2021
ಕಸ್ಟಮರ್ ಕೇರ್ ಅಧಿಕಾರಿಯಂತೆ ನಟಿಸಿ ಮೊಬೈಲ್ ಆಪ್ ಒಂದನ್ನು ಇನ್ ಸ್ಟಾಲ್ ಮಾಡಿಕೊಳ್ಳುವಂತೆ ಸೂಚಿಸಿ, ಉಪನ್ಯಾಸಕಿಯೊಬ್ಬರ ಬ್ಯಾಂಕ್ ಖಾತೆಯಿಂದ ಹಣ ಲಪಟಾಯಿಸಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಶಿವಮೊಗ್ಗದ ಖಾಸಗಿ ಕಾಲೇಜು ಉಪನ್ಯಾಸಕಿಯೊಬ್ಬರ ಮೊಬೈಲ್‍ಗೆ, ಇನ್ನು 24 ಗಂಟೆಯಲ್ಲಿ ನಿಮ್ಮ ನಂಬರ್ ಬ್ಲಾಕ್ ಆಗಲಿದೆ ಎಂದು ಮೆಸೇಜ್ ಬಂದಿದೆ. ವಿಚಲಿತರಾದ ಉಪನ್ಯಾಸಕಿ ಮೆಸೇಜು ಬಂದಿದ್ದ ನಂಬರ್‍ಗೆ ಕರೆ ಮಾಡಿದ್ದಾರೆ. ಕಸ್ಟಮರ್ ಕೇರ್ ಅಧಿಕಾರಿಯಂತೆ ಮಾತನಾಡಿದ ವ್ಯಕ್ತಿಯೊಬ್ಬ ಕೂಡಲೆ 10 ರೂ. ರೀಚಾರ್ಜ್ ಮಾಡುವಂತೆ ಸೂಚಿಸಿದ್ದಾನೆ.
ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
ಮೊಬೈಲ್ ಅಪ್ಲಿಕೇಷನ್ ಒಂದನ್ನು ಡೌನ್ ಲೋಡ್ ಮಾಡಿಕೊಂಡು, ಅದರ ಮೂಲಕ ತಮ್ಮ ರೀಚಾರ್ಜ್ ಮಾಡಿಕೊಳ್ಳಿ ಎಂದು ಸೂಚಿಸಿದ್ದಾನೆ. ಅದರಂತೆ ಆಪ್ ಒಂದನ್ನು ಡೌನ್ ಲೋಡ್ ಮಾಡಿಕೊಂಡು, ಅದರಲ್ಲಿ ಡೆಬಿಟ್ ಕಾರ್ಡ್ ನಂಬರ್, ಸಿವಿವಿ ಟೈಪ್ ಮಾಡಿ 10 ರೂ. ರೀಚಾರ್ಜ್ ಮಾಡಿಕೊಳ್ಳಲು ಮುಂದಾಗಿದ್ದಾರೆ. ಆದರೆ ಉಪನ್ಯಾಸಕಿಯ ಮೊಬೈಲ್‍ಗೆ ನಿಮ್ಮ ಬ್ಯಾಂಕ್ ಖಾತೆಯಿಂದ 10 ಸಾವಿರ ರೂ. ಕಡಿತವಾಗಿದೆ ಎಂಬ ಮೆಸೇಜು ಬಂದಿದೆ. ಬಳಿಕ 600 ರೂ, ಮತ್ತು 38 ರೂ. ಕ್ರಮವಾಗಿ ಕಡಿತವಾಗಿರುವ ಮೆಸೇಜು ಬಂದಿದೆ. ಈ ಬಗ್ಗೆ ವಿಚಾರಿಸಿದಾಗ ಕಸ್ಟಮರ್ ಕೇರ್ ಅಧಿಕಾರಿಯಂತೆ ಮಾತನಾಡುತ್ತಿದ್ದ ವ್ಯಕ್ತಿ, ಈ ಹಣ ಮರಳಿ ನಿಮ್ಮ ಖಾತೆಗೆ ಬರಲಿದೆ ಎಂದು ನಂಬಿಸಿದ್ದಾನೆ.
ಅಷ್ಟೆ ಅಲ್ಲದೆ ಇನ್ನೊಂದು ಬ್ಯಾಂಕ್ ಖಾತೆ ಇದ್ದರೆ ವಿವರ ತಿಳಿಸುವಂತೆ ಕೇಳಿದ್ದಾನೆ. ಆಗ ತಾವು ವಂಚನೆಗೊಳಗಾಗಿರುವುದು ಉಪನ್ಯಾಸಕಿಗೆ ಅರಿವಾಗಿದೆ. ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.