ಶಿವಮೊಗ್ಗ ಲೈವ್.ಕಾಂ | SHIMOGA NEWS | 14 ಜೂನ್ 2021
ಹಿನ್ನೀರು ಭಾಗದಲ್ಲಿ ಜೋರು ಮಳೆಯಾಗುತ್ತಿರುವುದರಿಂದ ತುಂಗಾ ಜಲಾಶಯದ ಕ್ರಸ್ಟ್ ಗೇಟುಗಳನ್ನು ತೆಗೆದು ನೀರು ಹೊರಗೆ ಬಿಡಲಾಗಿದೆ. ಇವತ್ತು ಜಲಾಶಯದ 22 ಗೇಟುಗಳ ಪೈಕಿ 21 ಗೇಟುಗಳನ್ನು ಮೇಲೆತ್ತಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ವಿದ್ಯುತ್ ಉತ್ಪಾದನೆ ಮತ್ತು ಜಲಾಶಯದಿಂದ ನೇರವಾಗಿ ನದಿಗೆ ಒಟ್ಟು 7300 ಕ್ಯೂಸೆಕ್ ನೀರನ್ನು ಹೊರಗೆ ಹರಿಸಲಾಗುತ್ತಿದೆ. ಮೊದಲ ಮೂರು ಗೇಟುಗಳಲ್ಲಿ ಒಂದು ಅಡಿಯಷ್ಟು ಮೇಲೆತ್ತಲಾಗಿದೆ. ಉಳಿದ 18 ಗೇಟುಗಳನ್ನು ಒಂದು ಇಂಚ್‍ನಷ್ಟು ಮೇಲೆತ್ತಲಾಗಿದೆ.
ತುಂಗಾ ಜಲಾಶಯಕ್ಕೆ 3774 ಕ್ಯೂಸೆಕ್ ಒಳಹರಿವು ಇದೆ. 3.24 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ 2.411 ಟಿಎಂಸಿಯಷ್ಟು ನೀರಿದೆ. ಮಳೆ ಪ್ರಮಾಣದ ಆಧಾರದಲ್ಲಿ ಜಲಾಶಯದ ಒಳ, ಹೊರ ಹರಿವು ನಿರ್ಧಾರವಾಗಲಿದೆ.
VIDEO REPORT
ಲಕ್ಷಣ ಕಂಡು ಬಂದ ಕೂಡಲೆ ಪರೀಕ್ಷೆ ಮಾಡಿಸಿಕೊಳ್ಳಿ. ಶಿವಮೊಗ್ಗದಲ್ಲಿ ಸುರಕ್ಷಿತವಾಗಿ ಕೋವಿಡ್ ಪರೀಕ್ಷೆಗೆ ಫೋನ್ ಮಾಡಿ, ರಿಜಿಸ್ಟರ್ ಮಾಡಿಕೊಳ್ಳಿ
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]