ಸಚಿವರು, ಶಾಸಕರ ಮುಂದೆಯೇ ಸಭೆಯಲ್ಲಿ ಪಿಡಿಒಗೆ ಕ್ಲಾಸ್ ತೆಗೆದುಕೊಂಡ ಮಹಿಳೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 14 ಜೂನ್ 2021

ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಎಂದು ಮಹಿಳೆಯೊಬ್ಬರು ಸಚಿವರ ಮುಂದೆಯೇ ಪಿಡಿಒಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಹಸೂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೋವಿಡ್ ಪರಿಸ್ಥಿತಿ ನಿರ್ವಹಣೆ ಕುರಿತು ಟಾಸ್ಕ್ ಫೋರ್ಸ್ ಸಭೆ ನಡೆಸಲಾಯಿತು. ಈ ವೇಳೆ ಗ್ರಾಮದ ಮಹಿಳೆಯೊಬ್ಬರು ಸಚಿವ ಕೆ.ಎಸ್.ಈಶ್ವರಪ್ಪ, ಶಾಸಕ ಅಶೋಕ್ ನಾಯ್ಕ್‍ ಅವರ ಮುಂದೆಯೇ ಪಿಡಿಒಗೆ ತರಾಟೆ ತೆಗೆದುಕೊಂಡರು.

ಮಹಿಳೆಯ ಆಕ್ಷೇಪಕ್ಕೆ ಕಾರಣವೇನು?

ಗ್ರಾಮದಲ್ಲಿ ಸ್ಯಾನಿಟೈಸ್ ಮಾಡಿದ್ದೇವೆ. ಟೆಸ್ಟ್‍ಗಳನ್ನು ಮಾಡಿಸಿದ್ದೇವೆ ಎಂದು ಪಿಡಿಒ ಸಭೆಗೆ ಮಾಹಿತಿ ನೀಡಿದರು. ಇದರಿಂದ ಆಕ್ರೋಶಗೊಂಡ ಮೀನಮ್ಮ ಎಂಬ ಮಹಿಳೆ, ಸುಳ್ಳು ಮಾಹಿತಿ ಕೊಡುತ್ತಿದ್ದೀರ ಎಂದು ಸಭೆಯಲ್ಲಿ ಎದ್ದು ನಿಂತರು. ತಮ್ಮ ಮನೆಗೆ ಯಾರೊಬ್ಬರು ಬಂದಿಲ್ಲ. ಸ್ಯಾನಿಟೈಸ್ ಮಾಡಿಲ್ಲ ಎಂದು ಆರೋಪಿಸಿದರು.

ಇತ್ತ ಸಚಿವ ಕೆ.ಎಸ್‍.ಈಶ್ವರಪ್ಪ ಅವರು ಏರುಧ್ವನಿಯಲ್ಲಿ ಮಹಿಳೆಗೆ ಕೂರುವಂತೆ ಸೂಚಿಸಿದರು. ಇದಾಗುತ್ತಿದ್ದಂತೆ ಮಹಿಳೆಯೆ ಸಭೆಯಿಂದ ಹೊರ ನಡೆದರು.

ಇದರ ವಿಡಿಯೋ ರಿಪೋರ್ಟ್ ಇಲ್ಲಿದೆ

189146674 1131587070654535 9127287656608744677 n.jpg? nc cat=107&ccb=1 3& nc sid=8bfeb9& nc ohc=Jmr3WxJAjjEAX i1r8l& nc ht=scontent.fblr1 3

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಮೇಲ್ shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment