ಜಿಲ್ಲೆಯಲ್ಲಿ ಮುಂಗಾರು ಜೋರು, ಶಿವಮೊಗ್ಗ ಸಿಟಿಯಲ್ಲಿ ಮಳೆ, ಬಿಸಿಲಿನಾಟ, ಹೊನ್ನೆತಾಳುವಿನಲ್ಲಿ ಅಬ್ಬರ, ಎಲ್ಲೆಲ್ಲಿ ಹೇಗಿದೆ ಮಳೆ?

ಶಿವಮೊಗ್ಗ ಲೈವ್.ಕಾಂ | SHIMOGA NEWS | 16 JUNE 2021 ➤ ಸುದ್ದಿಯ ಮುಂದಿನ 8 ಪ್ಯಾರಾಗಳು ಕೆಳಗಿವೆ.

ಶಿವಮೊಗ್ಗ ಜಿಲ್ಲೆಯಾದ್ಯಂತ ಮುಂಗಾರು ಚುರುಕು ಪಡೆದುಕೊಂಡಿದೆ. ಕೆಲವಡೆ ಬಿಡುವು ಕೊಡದೆ ಮಳೆ ಸುರಿಯುತ್ತಿದೆ. ಹಾಗಾಗಿ ಕೆರೆಗಳು, ಜಲಾಶಯಗಳಲ್ಲಿ ನೀರನ ಪ್ರಮಾಣ ಹೆಚ್ಚಳವಾಗುತ್ತಿದೆ.

ಹೊಸನಗರ ತಾಲೂಕಿನಲ್ಲಿ ಭಾರಿ ಮಳೆ ಸುರಿಯುತ್ತಿದೆ. ಮನೆಯಿಂದ ಹೊರ ಬರಲಾಗದಷ್ಟು ಮಳೆ ಅಬ್ಬರಿಸುತ್ತಿದೆ. ಇದರ ನಡುವೆಯೆ ಕೃಷಿ ಚಟುವಟಿಕೆ ಬಿರುಸು ಪಡೆದುಕೊಂಡಿದೆ.

ಹೊನ್ನೆತಾಳುವಿನಲ್ಲಿ ಭಾರಿ ಮಳೆ

ಆಗುಂಬೆ ಸಮೀಪದ ಹೊನ್ನೆತಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಭಾರಿ ಮಳೆಯಾಗುತ್ತಿದೆ. ಕಳೆದ 24 ಗಂಟೆ ಅವಧಿಯಲ್ಲಿ 124 ಮಿ.ಮಿ ಮಳೆಯಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ. ಉಳಿದಂತೆ ತೀರ್ಥಹಳ್ಳಿ ತಾಲೂಕಿನಲ್ಲಿ ಉತ್ತಮ ಮಳೆಯಾಗಿದೆ. ಸಾಗರದಲ್ಲೂ ಮುಂಗಾರು ಜೋರಿದೆ.

ಶಿವಮೊಗ್ಗದಲ್ಲಿ ಮಳೆ, ಬಿಸಿಲಿನ ಆಟ

ಶಿವಮೊಗ್ಗದಲ್ಲಿ ಬೆಳಗ್ಗೆಯಿಂದ ಮಳೆಯಾಗುತ್ತಿತ್ತು. ಈಗಾಗಲೇ ವರುಣ ಸ್ವಲ್ಪ ಬಿಡುವು ನೀಡಿದ್ದಾನೆ. ಬಿಸಿಲಿನ ದರ್ಶನವಾಗುತ್ತಿದೆ. ಮಂಗಳವಾರವು ಶಿವಮೊಗ್ಗದಲ್ಲಿ ಮಳೆ, ಬಿಸಿಲಿನ ಆಟವಿತ್ತು.

ಕೃಷಿ ಚಟುವಟಿಕೆ ಬಿರುಸು

ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದೆ. ಮಲೆನಾಡು ಭಾಗಗಳು ಅನಿಸಿಕೊಂಡಿರುವ ಸಾಗರ, ತೀರ್ಥಹಳ್ಳಿ, ಹೊಸನಗರದಲ್ಲಿ ಜೋರು ಮಳೆಯಾಗುತ್ತಿದೆ. ಅರೆ ಮಲೆನಾಡು ಭಾಗಗಳಲ್ಲೂ ಉತ್ತಮ ಮಳೆಯಾಗಿದ್ದು, ಮೆಕ್ಕೆ ಜೋಳ ಬಿತ್ತನೆಗೆ ವೇಗ ಸಿಕ್ಕಂತಾಗಿದೆ. ಅಡಕೆ ತೋಟಗಳಲ್ಲಿ ಬಿಸಿಗಾಲುವೆಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ.

ಇನ್ಮುಂದೆ ಕರೋನ ಪರೀಕ್ಷೆ ನಿಮ್ಮ ಮನೆಯಲ್ಲೇ ಆಗುತ್ತೆ. ಶಿವಮೊಗ್ಗ ನಗರ ವ್ಯಾಪ್ತಿಯ ಯಾವುದೆ ಏರಿಯಾದಿಂದ ಕರೆ ಮಾಡಿ. ಪರೀಕ್ಷೆಗೆ ನಿಮ್ಮ ಮನೆಗೆ ಬರ್ತಾರೆ ತಜ್ಞರು.

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಮೇಲ್ shivamoggalive@gmail.com

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Leave a Comment

ಮುಂದಿನ ಸುದ್ದಿ ಓದಿ TRENDING

ಹೆಂಡತಿಗೆ ಕಿರುಕುಳ, ಗಂಡನಿಗೆ ಜೈಲು ಶಿಕ್ಷೆ, ದಂಡ