‌ರೈತರೆ ಗಮನಿಸಿ, ಬೆಳೆ ವಿಮೆ ಕಂತು ಪಾವತಿಸಲು ಅವಕಾಶ, ಕೊನೆಯ ದಿನಾಂಕ ಪ್ರಕಟ

ಶಿಕಾರಿಪುರ: ತಾಲೂಕಿನಲ್ಲಿ 2026–27ನೇ ಸಾಲಿನ ಮರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆವಿಮೆ (Insurance) ಯೋಜನೆಯಡಿ ವಿವಿಧ ತೋಟಗಾರಿಕೆ ಬೆಳೆಗಳಿಗೆ ವಿಮೆ ಕಂತು ಪಾವತಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ಫಸಲು ಬಿಡುವ ಅಡಿಕೆ, ಮಾವು, ಕಾಳುಮೆಣಸು ಮತ್ತು ನಾಟಿ ಮಾಡಿರುವ ಶುಂಠಿ ಬೆಳೆಗಳಿಗೆ ರೈತರು ವಿಮೆ ಮಾಡಿಸಬಹುದಾಗಿದೆ. ಆಸಕ್ತರು ಜುಲೈ 31ರ ಒಳಗೆ ಹತ್ತಿರದ ಸಾಮಾನ್ಯ ಸೇವಾ ಕೇಂದ್ರ, ಗ್ರಾಮ ಒನ್ ಅಥವಾ ಬ್ಯಾಂಕುಗಳಲ್ಲಿ ವಿಮೆ ಕಂತು ಪಾವತಿಸಬೇಕು.

Agriculture-News-Farmer

ಬೆಳೆವಾರು ವಿಮೆ ಕಂತಿನ ವಿವರ

  • ಅಡಿಕೆ: ವಿಮಾ ಮೊತ್ತ ₹1,28,000 ಆಗಿದ್ದು, ರೈತರು ಪಾವತಿಸಬೇಕಾದ ಕಂತು ₹2,560 (ಪ್ರತಿ ಗುಂಟೆಗೆ ₹64).
  • ಮಾವು: ವಿಮಾ ಮೊತ್ತ ₹80,000 ಆಗಿದ್ದು, ರೈತರು ಪಾವತಿಸಬೇಕಾದ ಕಂತು ₹3,200 (ಪ್ರತಿ ಗುಂಟೆಗೆ ₹80).
  • ಶುಂಠಿ: ವಿಮಾ ಮೊತ್ತ ₹1,30,000 ಆಗಿದ್ದು, ರೈತರು ಪಾವತಿಸಬೇಕಾದ ಕಂತು ₹2,600 (ಪ್ರತಿ ಗುಂಟೆಗೆ ₹65).
  • ಕಾಳುಮೆಣಸು: ವಿಮಾ ಮೊತ್ತ ₹47,000 ಆಗಿದ್ದು, ರೈತರು ಪಾವತಿಸಬೇಕಾದ ಕಂತು ₹1,692 (ಪ್ರತಿ ಗುಂಟೆಗೆ ₹42.30).

ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಶಿಕಾರಿಪುರದ ತೋಟಗಾರಿಕೆ ಇಲಾಖೆ ಕಚೇರಿಯನ್ನು ಸಂಪರ್ಕಿಸಲು ತಿಳಿಸಲಾಗಿದೆ.

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Shivamogga Live Promotion