ಕರೋನ ಸೋಂಕಿತನ ಮನೆಯಲ್ಲಿ ಮದ್ಯದ ಪಾರ್ಟಿ, ಟಾಸ್ಕ್ ಫೋರ್ಸ್ ಸದಸ್ಯನಿಗೆ ಆವಾಜ್

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 22 JUNE 2021

ಕರೋನ ಸೋಂಕಿತನ ಮನೆಯಲ್ಲಿ ಮದ್ಯದ ಪಾರ್ಟಿ ಮಾಡಿದ್ದಲ್ಲದೆ, ಟಾಸ್ಕ್ ಫೋರ್ಸ್‍ ಸದಸ್ಯನಿಗೆ ನಿಂದಿಸಿದ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.

ತೀರ್ಥಹಳ್ಳಿ ತಾಲೂಕಿನ ಬಸವಾಪುರ ಗ್ರಾಮದ ಯುವಕ ಮತ್ತು ಆತನ ಕುಟುಂಬದವರಿಗೆ ಕರೋನ ಪಾಸಿಟಿವ್ ಬಂದಿತ್ತು. ಹೋಂ ಕ್ವಾರಂಟೈನ್‍ನಲ್ಲಿ ಇರುವಂತೆ ಸೂಚಿಸಲಾಗಿತ್ತು. ಆದರೆ ನಿಯಮ ಉಲ್ಲಂಘಿಸಿದ ಯುವಕ ತನ್ನ ಇಬ್ಬರು ಸ್ನೇಹಿತರೊಂದಿಗೆ ತನ್ನ ಮನೆಯಲ್ಲಿ ಪಾರ್ಟಿ ಮಾಡಿದ್ದಾನೆ.

ಕುಕ್ಕೆ ಬಾಂಡ್ಯ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮತ್ತು ಕರೋನ 19 ಟಾಸ್ಕ್‍ ಫೋರ್ಸ್ ಸದಸ್ಯರಾಗಿರುವ ಸಚಿನ್‍ ಅವರಿಗೆ ಯುವಕನ ಮನೆಯವರೆ ಪಾರ್ಟಿ ವಿಚಾರ ತಿಳಿಸಿದ್ದಾರೆ. ಹಾಗಾಗಿ ಯುವಕನ ಸ್ನೇಹಿತರಿಗೆ ಸಚಿನ್ ಅವರು ತಿಳಿವಳಿಕೆ ಹೇಳಿ, ಎಚ್ಚರಿಕೆ ನೀಡಿದ್ದರು. ಇದರಿಂದ ಆಕ್ರೋಶಗೊಂಡ ಯುವಕ ಮತ್ತು ಆತನ ಸ್ನೇಹಿತರು ಸಚಿನ್ ಅವರ ಮನೆಗೆ ಕಾಂಪೌಂಡ್‍ಗೆ ನುಗ್ಗಿ, ಅವರನ್ನು ನಿಂದಿಸಿದ್ದಾರೆ. ಹಾಗಾಗಿ ಅವರ ವಿರುದ್ಧ ದೂರು ದಾಖಲು ಮಾಡಲಾಗಿದೆ.

ಯುವಕ ಮತ್ತು ಆತನ ಇಬ್ಬರು ಸ್ನೇಹಿತರ ವಿರುದ್ಧ ಸಾಂಕ್ರಾಮಿಕ ಕಾಯಿಲೆ ಕಾಯ್ದೆ ಮತ್ತು ಐಪಿಸಿಯ ವಿವಿಧ ಸೆಕ್ಷನ್‍ಗಳ ಅಡಿ ಪ್ರಕರಣ ದಾಖಲು ಮಾಡಲಾಗಿದೆ.

201421733 1138954733251102 9013304741762151542 n.jpg? nc cat=110&ccb=1 3& nc sid=8bfeb9& nc ohc=9tJivDm38zIAX W2r9 & nc ht=scontent.fblr20 1

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಮೇಲ್ shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : June 22, 2021

Leave a Comment