ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ ಲೈವ್.ಕಾಂ | SHIMOGA NEWS | 26 JUNE 2021
ಶಿವಮೊಗ್ಗ ಜಿಲ್ಲೆಯಲ್ಲಿ ಪುನಃ ಪೆಟ್ರೋಲ್ ಬೆಲೆ ಏರಿಕೆಯಾಗಿದೆ. ಇವತ್ತು 36 ಪೈಸೆ ಹೆಚ್ಚಳವಾಗಿದೆ. ಇದರಿಂದ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 102.78 ರೂ.ಗೆ ಏರಿಕೆಯಾದಂತಾಗಿದೆ.
ಜೂನ್ ತಿಂಗಳಲ್ಲಿ 14 ಬಾರಿ ಪೆಟ್ರೋಲ್ ದರ ಹೆಚ್ಚಳವಾಗಿದೆ. ಈವರೆಗೂ ಈ ತಿಂಗಳಲ್ಲಿ ಪ್ರತಿ ಲೀಟರ್ಗೆ 4.12 ರೂ. ಏರಿಕೆಯಾಗಿದೆ.
ಯಾವ್ಯಾವ ದಿನ ಎಷ್ಟೆಷ್ಟು ಏರಿದೆ?
ಜೂನ್ 1ರಂದು 27 ಪೈಸೆ ಹೆಚ್ಚಳವಾಗಿತ್ತು. ಜೂನ್ 4ರಂದು 28 ಪೈಸೆ, ಜೂನ್ 6ಕ್ಕೆ 28 ಪೈಸೆ, ಜೂನ್ 7ರಂದು 29 ಪೈಸೆ, ಜೂನ್ 9ರಂದು 26 ಪೈಸೆ, ಜೂನ್ 11ರಂದು 30 ಪೈಸೆ, ಜೂನ್ 12ರಂದು 28 ಪೈಸೆ, ಜೂನ್ 14ರಂದು 40 ಪೈಸೆ, ಜೂನ್ 16ರಂದು 26 ಪೈಸೆ, ಜೂನ್ 18ರಂದು 28 ಪೈಸೆ, ಜೂನ್ 20ರಂದು 30 ಪೈಸೆ, ಜೂನ್ 22ರಂದು 29 ಪೈಸೆ, ಜೂನ್ 24ರಂದು 27 ಪೈಸೆ, ಜೂನ್ 26ರಂದು 36 ಪೈಸೆ ಏರಿಕೆಯಾಗಿದೆ.
ಡಿಸೇಲ್ ದರವು ದುಬಾರಿ
ಇವತ್ತು ಜಿಲ್ಲೆಯಲ್ಲಿ ಡಿಸೇಲ್ ಬೆಲೆಯು ಹೆಚ್ಚಾಗಿದೆ. ಪ್ರತಿ ಲೀಟರ್ ಡಿಸೇಲ್ಗೆ 37 ಪೈಸೆ ಏರಿಕೆಯಾಗಿದೆ. ಹಾಗಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತು ಡಿಸೇಲ್ ದರ ಪ್ರತಿ ಲೀಟರ್ಗೆ 95.18 ರೂ.ಗೆ ತಲುಪಿದೆ. ಜೂನ್ ತಿಂಗಳಲ್ಲಿ ಈವರೆಗೂ ಪ್ರತಿ ಲೀಟರ್ಗೆ 3.72 ರೂ. ಹೆಚ್ಚಳವಾಗಿದೆ.
ಜಿಲ್ಲೆಯಲ್ಲಿ ಪವರ್ ಪಟ್ರೋಲ್ ರೇಟು 106.33 ರೂ. ಟರ್ಬೊ ಜೆಟ್ ಪೆಟ್ರೋಲ್ ಪ್ರತಿ ಲೀಟರ್ಗೆ 98.51 ರೂ. ಹೆಚ್ಚಳವಾಗಿದೆ.
ಇದನ್ನೂ ಓದಿ | ಶಿವಮೊಗ್ಗದಲ್ಲಿ ಖಾಸಗಿ ಬಸ್ ಪುನಾರಂಭ ವಿಳಂಬಕ್ಕೆ ಐದು ಕಾರಣ, ಏನದು?

ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com
LATEST NEWS
- ಶಿವಮೊಗ್ಗ ವಿಮಾನ ನಿಲ್ದಾಣ, ಮಹತ್ವದ ಟೆಸ್ಟ್ನಲ್ಲಿ ಪಾಸ್, DoVR ಕೆಲಸ ಶುರು, ಏನಿದು? ಪ್ರಯೋಜನ ಏನು?

- ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯು ಹೆಚ್ಚಿದ ತಾಪಮಾನ? ಇವತ್ತು ಎಷ್ಟಿರುತ್ತೆ?

- ಭಟ್ಕಳದ ಮಹಿಳೆ ಸೇರಿ ನಾಲ್ವರು ನಗರ ಠಾಣೆ ಪೊಲೀಸರ ಬಲೆಗೆ, ಕಾರಣವೇನು? ಏನೇನೆಲ್ಲ ಸಿಕ್ತು?

- ಇಂದಿನ ಪಂಚಾಂಗ – ಯಾವ್ಯಾವ ಸಮಯ ಯಾವಾಗಿದೆ?

- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

About The Editor
ನಿತಿನ್ ಆರ್.ಕೈದೊಟ್ಲು






