ಎರಡು ತಿಂಗಳ ಬಳಿಕ ಶಿವಮೊಗ್ಗ ಸಿಟಿ ಸೆಂಟರ್ ಮಾಲ್ ಪುನಾರಂಭ, ಹೇಗಿದೆ ವ್ಯವಸ್ಥೆ | VIDEO NEWS

ಶಿವಮೊಗ್ಗ ಲೈವ್.ಕಾಂ | SHIMOGA NEWS | 6 ಜುಲೈ 2021

ಮಾಲ್‍ಗಳನ್ನು ಓಪನ್ ಮಾಡಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಹಾಗಾಗಿ ಶಿವಮೊಗ್ಗದ ಸಿಟಿ ಸೆಂಟರ್‍ ಮಾಲ್‍ನಲ್ಲಿ ಕಾರ್ಯ ಚಟುವಟಿಕೆ ಆರಂಭವಾಗಿದೆ. ವ್ಯಾಪಾರ, ವಹಿವಾಟು ಕೂಡ ಶುರುವಾಗಿದೆ.

ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ವಾಹಿವಾಟು ನಡೆಸಲಾಗುತ್ತಿದೆ. ಮಾಲ್‍ನ ಒಳ ಪ್ರವೇಶಿಸುವ ಪ್ರತಿಯೊಬ್ಬರಿಗೂ ಥರ್ಮಲ್ ಸ್ಕ್ಯಾನಿಂಗ್ ಮಾಡಲಾಗುತ್ತಿದೆ. ಸ್ಯಾನಿಟೈಸರ್ ನೀಡಲಾಗುತ್ತಿದೆ. ಅಲ್ಲದೆ ಮಾಲ್‍ನ ಒಳಗೆ ಕಡ್ಡಾಯವಾಗಿ ಮಾಸ್ಕ್ ಬಳಕೆ ಮಾಡುವಂತೆ ನೋಡಿಕೊಳ್ಳಲಾಗುತ್ತಿದೆ.

ಸಿಟಿ ಸೆಂಟರ್‍ ಮಾಲ್‍ಗೆ ಸಂಪೂರ್ಣ ಸ್ಯಾನಿಟೈಸ್ ಮಾಡಲಾಗಿದೆ. ಒಳಗಿರುವ ಕಾಫಿ ಶಾಪ್, ಬಟ್ಟೆ ಅಂಗಡಿಗಳು, ತಿನಿಸು ಮಾರಾಟ ಮಳಿಗಗಳು, ಪಾದರಕ್ಷೆ ಸೇರಿದಂತೆ ಎಲ್ಲಾ ಮಳಿಗೆಗಳಿಗೂ ಸ್ಯಾನಿಟೈಸ್ ಮಾಡಲಾಗಿದೆ. ಗ್ರಾಹಕರು ಅಂಗಡಿಗೆ ಬಂದಾಗ ಕೋವಿಡ್ ನಿಯಮವನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗುತ್ತಿದೆ.

Kalleshwara-Enterprises.webp

ಸರ್ಕಾರದ ನಿರ್ಬಂಧ ಇರುವುದರಿಂದ ಸಿಟಿ ಸೆಂಟರ್‍ ಮಾಲ್‍ನಲ್ಲಿ ಇರುವ ಭಾರತ್ ಸಿನಿಮಾಸ್ ಮಲ್ಟಿಪ್ಲೆಕ್ಸ್‍ ಚಿತ್ರ ಮಂದಿರ ಬಾಗಿಲು ಬಂದ್ ಆಗಿದೆ. ಹಾಗಾಗಿ ಮಾಲ್‍ನಲ್ಲಿ ಸಿನಿಮಾ ವೀಕ್ಷಣೆಯ ಯೋಚನೆಯೊಂದಿಗೆ ಬರುವವರಿಗೆ ನಿರಾಸೆಯಾಗಲಿದೆ.

ಸಿಟಿ ಸೆಂಟರ್‍ ಮಾಲ್‍ನಲ್ಲಿ ವ್ಯವಸ್ಥೆ ಕುರಿತ ವಿಡಿಯೋ ಇಲ್ಲಿದೆ

(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment