ಕಂಬದಲ್ಲಿ ದುರಸ್ತಿ ವೇಳೆ ಪವರ್ ಮ್ಯಾನ್​​ಗೆ ವಿದ್ಯುತ್ ಶಾಕ್, ಸಾವು

ಶಿವಮೊಗ್ಗ ಲೈವ್.ಕಾಂ | SAGARA NEWS | 7 ಜುಲೈ 2021

ವಿದ್ಯುತ್ ಕಂಬದಲ್ಲಿ ದುರಸ್ತಿ ವೇಳೆ ಅವಘಡ ಸಂಭವಿಸಿದ್ದು ಕಿರಿಯ ಪವರ್‍ ಮ್ಯಾನ್ ಮೃತಪಟ್ಟಿದ್ದಾರೆ.

ಸುಳ್ಳಳ್ಳಿ ಬ್ಯಾಕೋಡು ಭಾಗದ ಹೊಸ್ಮನೆ ಜಯೇಂದ್ರ (30) ಮೃತ ದುರ್ದೈವಿ. ವಿದ್ಯುತ್ ಶಾಕ್‍ಗೆ ಒಳಗಾದ ಕೂಡಲೆ ಜಯೇಂದ್ರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಸಾಗರದ ಬಿ.ಹೆಚ್.ರಸ್ತೆಯ ಸರ್ಕಾರಿ ಪದವಿ ಕಾಲೇಜು ಸಮೀಪ ವಿದ್ಯುತ್ ಕಂಬದಲ್ಲಿ ದುರಸ್ತಿ ಕಾರ್ಯ ನಡೆಯುತ್ತಿತ್ತು. ಈ ವೇಳೆ ವಿದ್ಯುತ್ ಶಾಕ್‍ಗೆ ಒಳಗಾಗಿ ಜಯೇಂದ್ರ ಗಂಭೀರ ಗಾಯಗೊಂಡಿದ್ದರು.

Kalleshwara-Enterprises.webp

ಜಯೇಂದ್ರ ಅವರಿಗೆ ಪತ್ನಿ, ಒಂದು ವರ್ಷ ತುಂಬದ ಮಗು ಇದ್ದಾರೆ.

(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment