ಸಾಲ ಪಡೆದ ವ್ಯಕ್ತಿಗೆ ದೊಣ್ಣೆಯಿಂದ ಹೊಡೆದ ಜಾಮೀನು ನೀಡಿದ್ದ ವ್ಯಕ್ತಿ, ಕಾರಣವೇನು?

SAGARA NEWS: ಬ್ಯಾಂಕ್ ಸಾಲ ಮರುಪಾವತಿಸದ ಹಿನ್ನೆಲೆ ಜಾಮೀನುದಾರನಿಗೆ ನೋಟಿಸ್ ಬಂದಿದ್ದಕ್ಕೆ, ಸಾಲ ಪಡೆದಿದ್ದ ವ್ಯಕ್ತಿಯ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಒಡ್ಡಿಲಾಗಿದೆ.

ಗಾಯಾಳು ವ್ಯಕ್ತಿಯು (ಹೆಸರು ಗೌಪ್ಯ) ಜಮೀನಿನಲ್ಲಿ ತೋಟ ಮಾಡಲು ಹಣದ ಅಗತ್ಯವಿದ್ದಿದ್ದರಿಂದ, ತಾಯಿಯ ಹೆಸರಿನಲ್ಲಿ ನಾಲ್ಕು ವರ್ಷಗಳ ಹಿಂದೆ ಗ್ರಾಮೀಣ ಬ್ಯಾಂಕೊಂದರಲ್ಲಿ ₹3 ಲಕ್ಷ ಸಾಲ ಪಡೆದಿದ್ದರು. ಈ ಸಾಲಕ್ಕೆ ಪರಿಚಿತ ವ್ಯಕ್ತಿಯೊಬ್ಬರು ಜಾಮೀನು ನೀಡಿದ್ದರು. ಆದರೆ ಸಾಲ ಪಡೆದ ದಿನದಿಂದ ಕೇವಲ ಬಡ್ಡಿ ಹಣವನ್ನು ಮಾತ್ರ ಪಾವತಿಸಲಾಗಿದ್ದು, ಅಸಲು ಹಣವನ್ನು ಮರುಪಾವತಿಸಿರಲಿಲ್ಲ ಎಂದು ತಿಳಿಸಲಾಗಿದೆ.

281123-Anandapura-Police-Station-Board.webp

ಇದರಿಂದಾಗಿ ಬ್ಯಾಂಕಿನಿಂದ ಸಾಲಗಾರರು ಹಾಗೂ ಜಾಮೀನುದಾರ ಇಬ್ಬರಿಗೂ ನೋಟಿಸ್ ಜಾರಿಯಾಗಿತ್ತು. ವ್ಯಕ್ತಿಯು ರಾತ್ರಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಆತನನ್ನು ಅಡ್ಡಗಟ್ಟಿದ ಜಾಮೀನುದಾರ, ಸಾಲದ ಹಣ ಕಟ್ಟದಿದ್ದಕ್ಕೆ ಅವಾಚ್ಯವಾಗಿ ನಿಂದಿಸಿದ್ದಾರೆ. ಅಲ್ಲದೆ, ಸ್ಥಳದಲ್ಲಿದ್ದ ದೊಣ್ಣೆಯಿಂದ ಸೊಂಟಕ್ಕೆ ಬಲವಾಗಿ ಹೊಡೆದು ಗಾಯಗೊಳಿಸಿದ್ದಲ್ಲದೆ, ಸಾಲದ ಹಣ ಕಟ್ಟದಿದ್ದರೆ ಜೀವ ತೆಗೆಯುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp