ಶಿವಮೊಗ್ಗ – ಯಶವಂತಪುರ ರೈಲು ಮತ್ತೆ ಶುರು, ಯಾವತ್ತಿಂದ ಪುನಾರಂಭ? ಟೈಮಿಂಗ್ ಏನು?

ಶಿವಮೊಗ್ಗ ಲೈವ್.ಕಾಂ | SHIMOGA NEWS | 4 ಆಗಸ್ಟ್ 2021 ಸುದ್ದಿಯ ಮುಂದಿನ 7 ಪ್ಯಾರಾಗಳು ಕೆಳಗಿವೆ.

ಲಾಕ್ ಡೌನ್ ಹಿನ್ನೆಲೆ ಸ್ಥಗಿತಗೊಂಡಿದ್ದ ಯಶವಂತಪುರ – ಶಿವಮೊಗ್ಗ – ಯಶವಂತಪುರ ರೈಲು ಪುನಾರಂಭವಾಗಲಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಮೊದಲ ಲಾಕ್ ಡೌನ್ ಸಂದರ್ಭ ಈ ರೈಲು ಸಂಚಾರ ಸ್ಥಗಿತಗೊಳಿಸಲಾಗಿತ್ತು. ಆಗಸ್ಟ್ 10ರಿಂದ ಯಶವಂತಪುರ – ಶಿವಮೊಗ್ಗ – ಯಶವಂತಪುರ ರೈಲು ಪುನಾರಂಭವಾಗಲಿದೆ ಎಂದು ತಿಳಿಸಲಾಗಿದೆ.

ಆಗಸ್ಟ್ 10ರಂದು ಬೆಳಗ್ಗೆ 9.15ಕ್ಕೆ ಬೆಂಗಳೂರಿನ ಯಶವಂತಪುರದಿಂದ ರೈಲು ಹೊರಡಲಿದೆ. 9.56ಕ್ಕೆ ತುಮಕೂರು, 10.58ಕ್ಕೆ ತಿಪಟೂರು, 11.25ಕ್ಕೆ ಅರಸೀಕೆರೆ, 12.05ಕ್ಕೆ ಕಡೂರು, 12.18ಕ್ಕೆ ಬೀರೂರು, 12.45ಕ್ಕೆ ತರೀಕೆರೆ, ಮಧ್ಯಾಹ್ನ 1.05ಕ್ಕೆ ಭದ್ರಾವತಿ, 2.30ಕ್ಕೆ ಶಿವಮೊಗ್ಗಕ್ಕೆ ತಲುಪಲಿದೆ.

ಅದೆ ದಿನ ಮಧ್ಯಾಹ್ನ 3.30ಕ್ಕೆ ಶಿವಮೊಗ್ಗದಿಂದ ರೈಲು ಹೊರಡಲಿದೆ. 3.48ಕ್ಕೆ ಭದ್ರಾವತಿ, 4.07ಕ್ಕೆ ತರೀಕೆರೆ, 4.33ಕ್ಕೆ ಬೀರೂರು, 4.43ಕ್ಕೆ ಕಡೂರು, 5.20ಕ್ಕೆ ಅರಸೀಕರೆ, 5.48ಕ್ಕೆ ತಿಪಟೂರು, 6.48ಕ್ಕೆ ತುಮಕೂರು, ರಾತ್ರಿ 9 ಗಂಟೆಗೆ ಬೆಂಗಳೂರಿನ ಯಶವಂತಪುರ ತಲುಪಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Shivamogga Live Promotion

Leave a Comment