ಶಿವಮೊಗ್ಗದ ಪೊಲೀಸ್‌ ಅಧಿಕಾರಿಗೆ ₹3.04 ಲಕ್ಷ ವಂಚನೆ, ಹೇಗಾಯ್ತು ಮೋಸ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS

ಶಿವಮೊಗ್ಗ: ಕೇಂದ್ರ ಸರ್ಕಾರದ ಮುದ್ರಾ ಯೋಜನೆ ಅಡಿಯಲ್ಲಿ ಸಬ್ಸಿಡಿ ಸಹಿತ ಭಾರಿ ಮೊತ್ತದ ಸಾಲ ಕೊಡಿಸುವುದಾಗಿ ನಂಬಿಸಿ ಪೊಲೀಸ್ ಅಧಿಕಾರಿಯೊಬ್ಬರಿಂದ ₹3.04 ಲಕ್ಷ ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡು ವಂಚಿಸಿರುವ ಘಟನೆ ನಗರದಲ್ಲಿ ನಡೆದಿದೆ.

➤ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ಪೊಲೀಸ್ ಅಧಿಕಾರಿಗೆ ಜೂನ್ 9ರಂದು ಕರೆ ಮಾಡಿದ್ದ ವ್ಯಕ್ತಿಯೊಬ್ಬ, ತಾನು ಮುದ್ರಾ ಲೋನ್ ವಿಭಾಗದ ಮ್ಯಾನೇಜರ್ ಎಂದು ಪರಿಚಯಿಸಿಕೊಂಡಿದ್ದ. ಯೋಜನೆಯಡಿ ₹5 ಲಕ್ಷ ಸಬ್ಸಿಡಿ ಇರುವ ₹25 ಲಕ್ಷ ಸಾಲ ಮಂಜೂರು ಮಾಡಿಸಿಕೊಡುವುದಾಗಿ ನಂಬಿಸಿ ಅವರ ಬ್ಯಾಂಕ್ ದಾಖಲೆಗಳನ್ನು ಪಡೆದುಕೊಂಡಿದ್ದ. ಸಾಲದ ಪ್ರಕ್ರಿಯೆಯ ವಿವಿಧ ಹಂತದ ಶುಲ್ಕಗಳ ನೆಪದಲ್ಲಿ ಜೂನ್ 9ರಿಂದ ಜೂನ್ 17ರ ಅವಧಿಯಲ್ಲಿ ಹಂತ ಹಂತವಾಗಿ ಒಟ್ಟು ₹3,04,000 ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದ ಎಂದು ಆರೋಪಿಸಲಾಗಿದೆ.

Online-Fraud-In-Shimoga

ಹಣ ವರ್ಗಾವಣೆಯಾದ ಬಳಿಕವೂ ಲೋನ್ ಮಂಜೂರಾಗದಿದ್ದಾಗ ತಾವು ವಂಚನೆಗೊಳಗಾಗಿರುವುದು ಪೊಲೀಸ್‌ ಅಧಿಕಾರಿಗೆ ಮನವರಿಕೆಯಾಗಿದೆ. ಘಟನೆ ಕುರಿತು ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.