ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ ಲೈವ್.ಕಾಂ | SHIMOGA NEWS | 5 ಆಗಸ್ಟ್ 2021
ನೆರೆ ಪರಿಹಾರ ಕಾರ್ಯಗಳು ತ್ವರಿತಗೊಳಿಸಬೇಕಿರುವ ಹಿನ್ನೆಲೆ ಸಚಿವ ಕೆ.ಎಸ್.ಈಶ್ವರಪ್ಪ ಜಿಲ್ಲಾ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯ ಜವಾಬ್ದಾರಿ ಹೊತ್ತಿರುವ ಸಚಿವ ಈಶ್ವರಪ್ಪ ಅವರು ಎರಡು ದಿನ ಮೂರು ತಾಲೂಕುಗಳಿಗೆ ಭೇಟಿ ನೀಡಿ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಲಿದ್ದಾರೆ.
ಶಿವಮೊಗ್ಗಕ್ಕೆ ಸಚಿವ ಈಶ್ವರಪ್ಪ
ಬಸವರಾಜ ಬೊಮ್ಮಾಯಿ ಅವರ ಸಂಪುಟ ಸೇರ್ಪಡೆಯಾದ ಬಳಿಕ ಇವತ್ತು ಮಧ್ಯಾಹ್ನ ಸಚಿವ ಕೆ.ಎಸ್.ಈಶ್ವರಪ್ಪ ಅವರು ಶಿವಮೊಗ್ಗಕ್ಕೆ ಭೇಟಿ ನೀಡುತ್ತಿದ್ದಾರೆ. ಸಂಜೆ ಶಿವಮೊಗ್ಗದ ಪಂಚವಟಿ ಕಾಲೋನಿಯಲ್ಲಿರುವ ಆರ್.ಎಸ್.ಎಸ್. ಕಚೇರಿ ಮಧುಕೃಪಾಗೆ ಹೋಗಲಿದ್ದಾರೆ. ಬಳಿಕ ಬಿಜೆಪಿ ಕಚೇರಿಗೆ ಭೇಟಿ ನೀಡಲಿದ್ದಾರೆ.
ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ
ಆಗಸ್ಟ್ 6ರಂದು ಸಚಿವ ಕೆ.ಎಸ್.ಈಶ್ವರಪ್ಪ ಅವರು ವಿವಿಧೆಡೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ 11 ಗಂಟೆಗೆ ತೀರ್ಥಹಳ್ಳಿ ತಾಲೂಕು, ಮಧ್ಯಾಹ್ನ 2 ಗಂಟೆಗೆ ಹೊಸನಗರ ತಾಲೂಕಿನಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಲಿದ್ದಾರೆ. ಆ.7ರಂದು ಸಾಗರ ತಾಲೂಕಿನ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಲಿದ್ದಾರೆ.
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯಗಳಿಗೆ ಚುರುಕು ಮುಟ್ಟಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರತಿ ಸಚಿವರಿಗೂ ಒಂದೊಂದು ಜಿಲ್ಲೆಯ ಜವಾಬ್ದಾರಿ ನೀಡಿದ್ದಾರೆ. ಅದರಂತೆ ಸಚಿವರುಗಳು ಇವತ್ತಿನಿಂದಲೇ ಕಾರ್ಯಪ್ರವೃತ್ತರಾಗಿದ್ದು, ಪ್ರವಾಸ ಕೈಗೊಂಡಿದ್ದಾರೆ.

(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
–
[su_divider top=”no” style=”dotted” divider_color=”#ffffff” link_color=”#000000″ margin=”10″]
[su_button url=”https://www.facebook.com/liveshivamogga” target=”blank” style=”flat” background=” #316FF6″ color=”#ffffff” size=”4″ radius=”0″ icon=”icon: facebook-square”][/su_button] [su_button url=”https://x.com/liveshivamogga” target=”blank” style=”flat” background=”#000000″ color=”#ffffff” size=”4″ radius=”0″ icon=”icon: twitter”][/su_button] [su_button url=”https://www.instagram.com/shivamoggalive/” target=”blank” style=”flat” background=”#E1306C” color=”#ffffff” size=”4″ radius=”0″ icon=”icon: instagram”][/su_button] [su_button url=”https://www.youtube.com/@shivamoggalive” target=”blank” style=”flat” background=”#FF0000″ color=”#ffffff” size=”4″ radius=”0″ icon=”icon: youtube-square”][/su_button] [su_button url=”https://www.linkedin.com/in/shivamogga-live-666a05322/” target=”blank” style=”flat” background=”#0072b1″ color=”#ffffff” size=”4″ radius=”0″ icon=”icon: linkedin-square”][/su_button]
[su_divider top=”no” style=”dotted” divider_color=”#ffffff” link_color=”#000000″ margin=”10″]
LATEST NEWS
- ಶಿವಮೊಗ್ಗದ ವಿವಿಧೆಡೆ ಇಂದು ಮತ್ತು ನಾಳೆ ಇಡೀ ದಿನ ಕರೆಂಟ್ ಇರಲ್ಲ, ಎಲ್ಲೆಲ್ಲಿ?

- ಸರಕು ರೇಟ್ ಕುಸಿತ, ಉಳಿದ ಅಡಿಕೆಗಳ ಧಾರಣೆ ಎಷ್ಟಿದೆ?, 13 ಮಾರ್ಚ್ 2026ರ ಅಡಿಕೆ ರೇಟ್

- ಸಹ್ಯಾದ್ರಿ ಉತ್ಸವದಲ್ಲಿ ಜಾನಪದ ಕಲೆಗಳ ಕಲರವ, ಏನಂದ್ರು ನಟಿ ಜಯಮಾಲಾ?

- ವಿದ್ಯಾನಗರದ ಆರ್ಮಿ ಕ್ಯಾಂಟೀನ್‌ನಲ್ಲಿ ಮದ್ಯ ಕಳ್ಳತನಕ್ಕೆ ಯತ್ನ, ಆಗಿದ್ದೇನು?

- ಕಾರ್ಗಲ್‌ನಲ್ಲಿ ವಾಂತಿ, ಭೇದಿ ಪ್ರಕರಣ ಹೆಚ್ಚಳ, ಮಹಿಳೆ ಸಾವು, ಜನರಲ್ಲಿ ಆತಂಕ

[su_divider top=”no” style=”dotted” divider_color=”#ffffff” link_color=”#000000″ margin=”10″]
[su_divider top=”no” style=”dotted” divider_color=”#ffffff” link_color=”#000000″ margin=”10″]
About The Editor
ನಿತಿನ್ ಆರ್.ಕೈದೊಟ್ಲು
















