ಪತ್ರೊಡೆ ಎಲೆ ಕೀಳಲು ಮರವೇರಿದ್ದ ಯುವಕ ಸಾವು, ಆಗಿದ್ದೇನು?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS

ತೀರ್ಥಹಳ್ಳಿ: ತಾಲೂಕಿನ ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಕ್ಕುಂದ ಗ್ರಾಮದಲ್ಲಿ ಪತ್ರೊಡೆ ಎಲೆ ಕೀಳಲು ಮರವೇರಿದ್ದ ಯುವಕನೊಬ್ಬ 11 ಕೆ.ವಿ ವಿದ್ಯುತ್ ಲೈನ್‌ಗೆ ತಗುಲಿ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಲಕ್ಕುಂದ ಗ್ರಾಮದ ಅಭಿಷೇಕ್ (28) ಮೃತಪಟ್ಟ ದುರ್ದೈವಿ.

➤ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ಅಭಿಷೇಕ್ ಅವರು ತಮ್ಮ ಗ್ರಾಮದ ಬಳಿ ಪತ್ರೊಡೆ ಎಲೆ ಕೀಳಲು ಮರ ಹತ್ತಿದ್ದರು. ಈ ವೇಳೆ ಮರದ ಪಕ್ಕದಲ್ಲೇ ಹಾದುಹೋಗಿದ್ದ 11 ಕೆ.ವಿ ಸಾಮರ್ಥ್ಯದ ವಿದ್ಯುತ್ ತಂತಿ ಆಕಸ್ಮಿಕವಾಗಿ ತಗುಲಿದೆ. ವಿದ್ಯುತ್ ಪ್ರವಾಹಿಸಿದ ತೀವ್ರತೆಗೆ ಯುವಕ ಮರದ ಮೇಲೆಯೇ ಪ್ರಾಣಬಿಟ್ಟಿದ್ದಾರೆ ಎನ್ನಲಾಗಿದೆ.

Thirthahalli-Abhishek-Incident.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಸಾರ್ವಜನಿಕರು ಹಾಗೂ ಪೊಲೀಸರು ಯುವಕನ ಮೃತದೇಹವನ್ನು ಕೆಳಕ್ಕಿಳಿಸಿ, ಮರಣೋತ್ತರ ಪರೀಕ್ಷೆಗಾಗಿ ತೀರ್ಥಹಳ್ಳಿ ತಾಲೂಕು ಆಸ್ಪತ್ರೆಗೆ ರವಾನಿಸಿದ್ದಾರೆ. ಆಗುಂಬೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.