ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ ಲೈವ್.ಕಾಂ | 24 ಫೆಬ್ರವರಿ 2019
ಸ್ಮಾರ್ಟ್ ಸಿಟಿ ಯೋಜನೆಯ ಶಂಕುಸ್ಥಾಪನೆಗೆ, ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಶಿವಮೊಗ್ಗಕ್ಕೆ ಭೇಟಿ ನೀಡಿದ್ದರು. ಪ್ರವಾಸಿ ಮಂದಿರಕ್ಕೆ ಆಗಮಿಸಿದ ಖಾದರ್ ಅವರು, ಅಲ್ಲಿಯೇ ಸುದ್ದಿಗೋಷ್ಠಿ ನಡೆಸುತ್ತಿದ್ದರು. ಮೊದಲು ಶಿವಮೊಗ್ಗ ಸಿಟಿಯ ಅಭಿವೃದ್ಧಿ ವಿಚಾರಗಳ ಕುರಿತು ಪ್ರಸ್ತಾಪಿಸಿದರು. ನಂತರ ಮಾತು ರಾಜಕೀಯದತ್ತ ಹೊರಳಿತು. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಟೀಕೆ, ಟಿಪ್ಪಣಿ ಮಾಡುತ್ತಿದ್ದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಮುಖಂಡರಷ್ಟೇ ಇದ್ದರು. ಇದೇ ವೇಳೆ, ಸಚಿವ ಖಾದರ್ ಅವರು ಬಂದಿರುವ ವಿಚಾರ ತಿಳಿದು, ಶಾಸಕ ಕೆ.ಎಸ್.ಈಶ್ವರಪ್ಪ ಪ್ರವಾಸಿ ಮಂದಿರಕ್ಕೆ ಬಂದರು. ಆಗ ಖಾದರ್ ಅವರು ಮೋದಿ ವಿರುದ್ಧ ಟೀಕೆ ಮಾಡುತ್ತಿದ್ದರು. ಇದು ಈಶ್ವರಪ್ಪ ಕಿವಿಗೆ ಬಿದ್ದಿದ್ದೇ ತಡ, ಅಲ್ರಿ ಸ್ವಾಮಿ, ವಿಧಾನಸೌಧದಲ್ಲೂ ಬೈತೀರ.. ಇಲ್ಲಿ ಬಂದೂ ಬೈತೀರಲ್ಲ.. ಏನ್ರಿ ಇದು ಅಂತಾ ಪ್ರಶ್ನಿಸಿದರು.

ಒಂದೆರಡು ಕ್ಷಣ ತಬ್ಬಿಬ್ಬಾದ ಸಚಿವ ಖಾದರ್, ಪತ್ರಿಕಾಗೋಷ್ಠಿ ಮುಗಿಸಿ ಬರುತ್ತೇನೆ ಎಂದರು. ಬೇಗ ಮುಗಿಸಿ ಬನ್ನಿ ಎಂದು ಈಶ್ವರಪ್ಪ ಪಕ್ಕದ ಕೋಣೆಗೆ ತೆರಳಿದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | shivamoggalive@gmail.com

LATEST NEWS
- ಹುಲಿಕಲ್ ಘಾಟಿ: ಎಲ್ಲಾ ವಾಹನ ಸಂಚಾರ ಬಂದ್, ಪರ್ಯಾಯ ಮಾರ್ಗ ಪ್ರಕಟ

- Three killed, several injured in soil cave-in at Hulikal Ghat

- BREAKING NEWS – ಹುಲಿಕಲ್ ಘಾಟಿಯಲ್ಲಿ ಘೋರ ದುರ್ಘಟನೆ, ಕಾರ್ಮಿಕರು ಸಾವು

- PU RESULT: ಶಿವಮೊಗ್ಗದ ಮಹೀನ್ ಖಾನಮ್ ಅಫ್ರಿದಿ ಮನೆಯಲ್ಲಿ ಸಂಭ್ರಮ, ಪಡೆದ ಅಂಕಗಳೆಷ್ಟು?

- ಇವತ್ತಿನ ಅಡಿಕೆ ರೇಟ್, ಶಿವಮೊಗ್ಗ, ಭದ್ರಾವತಿ, ತೀರ್ಥಹಳ್ಳಿಯಲ್ಲಿ ಎಷ್ಟಿದೆ ಅಡಿಕೆ ಧಾರಣೆ?

About The Editor
ನಿತಿನ್ ಆರ್.ಕೈದೊಟ್ಲು











