ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SORABA NEWS | 23 ಆಗಸ್ಟ್ 2021
ಕೆರೆ ದಂಡೆ ಮೇಲೆ ಕಸ ಸುರಿದು ಹೋಗುತ್ತಿದ್ದವರಿಂದಲೇ ಪೊಲೀಸರು ಕಸ ತೆಗಿಸಿದ್ದಾರೆ. ಅಲ್ಲದೆ ಇದು ಪುನರಾವರ್ತನೆಯಾದರೆ ಹತ್ತು ಸಾವಿರ ರೂ. ದಂಡ ವಿಧಿಸುವುದಾಗಿ ಎಚ್ಚರಿಕೆಯನ್ನೂ ನೀಡಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಸೊರಬ ತಾಲೂಕು ಆನವಟ್ಟಿಯ ಕುಬಟೂರಿನ ದೊಡ್ಡಕೆರೆ ಮತ್ತು ಆನವಟ್ಟಿ ತಾವರೆಕೆರೆ ದಂಡೆ ಮೇಲೆ ಕೆಲವು ಅಂಗಡಿ ಮಾಲೀಕರು, ಸಾರ್ವಜನಿಕರು ನಿತ್ಯ ಕಸ ಸುರಿಯುತ್ತಿದ್ದರು. ಭಾನುವಾರ ಕೆಲವರು ಕೆರೆ ಏರಿ ಮೇಲೆ ಕಸ ಸುರಿದು ಹೋಗುತ್ತಿದ್ದರು. ಇವರನ್ನು ತಡೆದ ಆನವಟ್ಟಿ ಪೊಲೀಸರು ಸುರಿದವರಿಂದಲೇ ಕಸ ತೆಗೆಸಿದ್ದಾರೆ.
ಆನವಟ್ಟಿ ಪಿಎಸ್ಐ ಪ್ರವೀಣ್ ಕುಮಾರ್ ಮತ್ತು ಸಿಬ್ಬಂದಿಯ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತವಾಗಿದೆ.
ಸ್ವಚ್ಛತೆಗೆ ಮುಂದಾಗಿದ್ದ ಪಟ್ಟಣ ಪಂಚಾಯಿತಿ
ಅವಳಿ ಕೆರೆ ಮಧ್ಯೆ ರಾಜ್ಯ ಹೆದ್ದಾರಿ ಹಾದು ಹೋಗುತ್ತದೆ. ಇಲ್ಲಿರುವ ಅಂಗಡಿ ಮಾಲೀಕರು ಕೆರೆ ಏರಿ ಮೇಲೆ ರೆಸ್ತೆಯ ಪಕ್ಕದಲ್ಲಿ ಕಸ ಸುರಿಯುತ್ತಿದ್ದರು. ಇದರಿಂದ ಕೆರೆಗೆ ಹಾನಿಯಾಗುತ್ತಿರುವ ಕುರಿತು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದರು. ಮಾಧ್ಯಮಗಳಲ್ಲೂ ವರದಿ ಪ್ರಕಟವಾಗಿತ್ತು. ಈ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯಿತಿ ವತಿಯಿಂದ ಸ್ವಚ್ಛತಾ ಕಾರ್ಯ ಆರಂಭಿಸಲಾಗಿತ್ತು. ಹೀಗಿದ್ದೂ ಕೆಲವರು ಕೆಸ ಸುರಿಯುವ ಪರಿಪಾಠ ಮುಂದುವರೆಸಿದ್ದರು.
ಕಸ ಸುರಿದು ಹೋಗುತ್ತಿದ್ದವರಿಗೆ ಪಾಠ ಕಲಿಸುವ ಸಲುವಾಗಿ ಪೊಲೀಸರು ಕಸ ಎತ್ತಿಸಿದ್ದಾರೆ. ಮುಂದೆ ದಂಡ ಹಾಕು ಎಚ್ಚರಿಕೆಯನ್ನೂ ನೀಡಿದ್ದಾರೆ.ಇನ್ನು, ಕೆರೆಗಳ ದಂಡೆ ಮೇಲೆ ಪೂರ್ಣ ಸ್ವಚ್ಛತೆ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200