ಪ್ರತಿಭಟನಾ ಮೆರವಣಿಗೆ ಸಾಗುವಾಗಷ್ಟೆ ಬಂದ್ ಆದ ಶಿವಮೊಗ್ಗ ಸಿಟಿ

Published On : ಸೆಪ್ಟೆಂಬರ್ 27, 2021

Published By : ನಿತಿನ್‌ ಆರ್‌.ಕೈದೊಟ್ಲು 

ಶಿವಮೊಗ್ಗ ಲೈವ್.ಕಾಂ | SHIMOGA NEWS | 27 ಸೆಪ್ಟೆಂಬರ್ 2021

ಭಾರತ್ ಬಂದ್ ಹಿನ್ನೆಲೆ ಶಿವಮೊಗ್ಗದಲ್ಲಿ ಕೆಲವು ಹೊತ್ತು ಅಂಗಡಿಗಳು ಬಂದ್ ಮಾಡಲಾಗಿತ್ತು. ರೈತರು ಪ್ರತಿಭಟನೆ ನಡೆಸಿದ ವೇಳೆ ಮಾತ್ರ ಸಿಟಿಯ ಪ್ರಮುಖ ರಸ್ತೆಗಳಲ್ಲಿ ಬಂದ್ ವಾತಾವರಣವಿತ್ತು.

ರೈತರು ಮತ್ತು ವಿವಿಧ ಸಂಘಟನೆಗಳು ರಾಮಣ್ಣ ಶ್ರೇಷ್ಠಿ ಪಾರ್ಕ್’ನಿಂದ ಮೆರವಣಿಗೆ ನಡೆಸಿದವು. ಈ ಸಂದರ್ಭ ಗಾಂಧಿ ಬಜಾರ್ ಸಂಪೂರ್ಣ ಬಂದ್ ಮಾಡಲಾಗಿತ್ತು. ವ್ಯಾಪಾರಿಗಳು ಬಾಗಿಲು ಹಾಕಿ ಅಂಗಡಿಗಳ ಮುಂದೆ ನಿಂತಿದ್ದರು. ಮೆರವಣಿಗೆ ಗಾಂಧಿ ಬಜಾರ್’ನಿಂದ ಸಾಗುತ್ತಿದ್ದಂತೆ ಅಂಗಡಿಗಳ ಬಾಗಿಲು ತೆಗೆದು ವ್ಯಾಪಾರ ಆರಂಭಿಸಲಾಯಿತು.

ಇದನ್ನು ಓದಿ | ಭಾರತ್ ಬಂದ್ | ಗಾಂಧಿ ಬಜಾರ್ ಸೇರಿದಂತೆ ಶಿವಮೊಗ್ಗದ ಪ್ರಮುಖ ರಸ್ತೆಯಲ್ಲಿ ರೈತರ ಪ್ರತಿಭಟನಾ ಮೆರವಣಿಗೆ

ಬಿ.ಹೆಚ್.ರಸ್ತೆ, ನೆಹರೂ ರೋಡ್, ಬಾಲರಾಜ ಅರಸ್ ರಸ್ತೆಯಲ್ಲೂ ಮೆರವಣಿಗೆ ಅವಧಿಯಲ್ಲಿ ಅಂಗಡಿಗಳನ್ನು ಬಂದ್ ಮಾಡಲಾಗಿತ್ತು.

NH nephrolody%2Bad %2Bkannada 10

ಇನ್ನು, ಭಾರತ್ ಬಂದ್ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು. ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀಪ್ರಸಾದ್ ಅವರು ಬಂದೋಬಸ್ತ್ ಪರಿಶೀಲನೆ ನಡೆಸಿದರು.

1632381434119645 4

0001

(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್ ಮೂಲಕ ಸುದ್ದಿಗಾಗಿ 7411700200

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ಸೆಪ್ಟೆಂಬರ್ 27, 2021

Leave a Comment