ಮದುವೆ ಮನೆಯ ಊಟದ ಪಂಕ್ತಿಯಲ್ಲಿ ಗೃಹಿಣಿಯ ಸೋಂಟ ಮುಟ್ಟಿದ ಯುವಕ, ಗಲಾಟೆ

ಸಾಗರ: ಮದುವೆ (wedding) ಸಮಾರಂಭವೊಂದರಲ್ಲಿ ಗೃಹಿಣಿಯೊಬ್ಬರ ಸೊಂಟ ಮುಟ್ಟಿದ ಪ್ರಕರಣ ತಾರಕಕ್ಕೇರಿ ಗಲಾಟೆಯಾಗಿದೆ. (ಈ ಸುದ್ದಿಯನ್ನು ಇನ್ನು 36 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಮಹಿಳೆಯು ತನ್ನ ಸಹೋದರಿಯೊಂದಿಗೆ ಮದುವೆ ಸಮಾರಂಭದಲ್ಲಿ ರಾತ್ರಿ ಊಟಕ್ಕೆ ಪಂಕ್ತಿಯಲ್ಲಿ ಕುಳಿತಿದ್ದರು. ಹಿಂದಿನ ಸಾಲಿನಲ್ಲಿ ಕುಳಿತಿದ್ದ ಯುವಕನೊಬ್ಬ ಗೃಹಿಣಿಯ ಸಹೋದರಿಯನ್ನು ಚುಡಾಯಿಸಿದ್ದಾನೆ. ಬಳಿಕ ಆಕೆಯ ಮೈ ಮುಟ್ಟಿದ್ದಾನೆ. ವಿಷಯ ತಿಳಿದು ಗೃಹಿಣಿಯು ಯುವಕನಿಗೆ ಬೈದಿದ್ದಾರೆ. ಆಗ ಯುವಕ ಗೃಹಿಣಿಯ ಸೊಂಟ ಮುಟ್ಟಿದ್ದಾನೆ ಎಂದು ಆರೋಪಿಸಲಾಗಿದೆ.

281123-Anandapura-Police-Station-Board.webp

ಇದನ್ನೂ ಓದಿ : ಮೇಯಲು ಹೋಗಿದ್ದು 3 ಹಸು, ವಾಪಾಸ್ಸಾಗಿದ್ದು ಒಂದೇ, ರಾತ್ರಿ ಮನೆಯಿಂದ ಅದೂ ನಾಪತ್ತೆ, ಆಗಿದ್ದೇನು?

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ

ಈ ವೇಳೆ ಗೃಹಿಣಿಯು ಕಿರುಚಿ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿಗೆ ವಿಷಯ ತಿಳಿಸಿದ್ದಾರೆ. ಪಕ್ಕದಲ್ಲಿದ್ದ ವ್ಯಕ್ತಿಯು ಹಿಂದಿನ ಸಾಲಿನಲ್ಲಿ ಕುಳಿತಿದ್ದ ಯುವಕನನ್ನು ಪ್ರಶ್ನೆ ಮಾಡಿದ್ದಾರೆ. ಆಗ ಯುವಕ ಮತ್ತಿತರರು ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆಪಾದಿಸಲಾಗಿದೆ. ಘಟನೆ ಸಂಬಂಧ ಆನಂದಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

Leave a Comment