ಹಾವು ಕಚ್ಚಿ ಎರಡೂವರೆ ವರ್ಷದ ಮಗು ಸಾವು

Published On : ಏಪ್ರಿಲ್ 16, 2026

Published By : ನಿತಿನ್‌ ಆರ್‌.ಕೈದೊಟ್ಲು 

ಸಾಗರ: ಮನೆಯ ಮುಂದೆ ಆಟವಾಡುತ್ತಿದ್ದ ಎರಡೂವರೆ ವರ್ಷದ ಮಗುವಿಗೆ ಹಾವು (cobra) ಕಡಿದು ಮೃತಪಟ್ಟಿದೆ. ಸಾಗರ ನಗರದ ಎಸ್.ಎನ್. ನಗರದಲ್ಲಿ ಘಟನೆ ನಡೆದಿದೆ.

ಗಣೇಶ್ ಎಂಬುವವರ ಪುತ್ರ ಭವಿನ್ ಮೃತ ಬಾಲಕ. ರಜೆಯ ಹಿನ್ನೆಲೆ ಭವಿನ್ ಅಜ್ಜಿ ಮನೆಗೆ ಬಂದಿದ್ದ.‌ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಬಾಲಕನ ಕೈಗೆ ನಾಗರಹಾವು ಕಚ್ಚಿದೆ ಎನ್ನಲಾಗಿದೆ.

ಇದನ್ನೂ ಓದಿ : ಮೇಯಲು ಹೋಗಿದ್ದು 3 ಹಸು, ವಾಪಾಸ್ಸಾಗಿದ್ದು ಒಂದೇ, ರಾತ್ರಿ ಮನೆಯಿಂದ ಅದೂ ನಾಪತ್ತೆ, ಆಗಿದ್ದೇನು?

ತಕ್ಷಣವೇ ಮಗುವನ್ನು ಸಾಗರದ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಮಗು ಕೊನೆಯುಸಿರೆಳೆದಿದೆ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ಏಪ್ರಿಲ್ 16, 2026

Leave a Comment