ಶಿವಮೊಗ್ಗ ಸಿಟಿಯ ಪ್ರತಿ ಮನೆಗೂ ಹಸಿರು, ನೀಲಿ ಬಣ್ಣದ ಕಸದ ಬುಟ್ಟಿ, ಇವತ್ತಿಂದಲೇ ವಿತರಣೆ ಶುರು

Published On : ಸೆಪ್ಟೆಂಬರ್ 30, 2021

Published By : ನಿತಿನ್‌ ಆರ್‌.ಕೈದೊಟ್ಲು 

ಶಿವಮೊಗ್ಗ ಲೈವ್.ಕಾಂ | SHIMOGA NEWS | 30 ಸೆಪ್ಟೆಂಬರ್ 2021

ಸ್ವಚ್ಛ ಶಿವಮೊಗ್ಗ ನಿರ್ಮಾಣದ ಗುರಿಯೊಂದಿಗೆ ನಗರದ ಪ್ರತಿ ಮನೆಗೂ ಕಸದ ಬುಟ್ಟಿ ವಿತರಣೆ ಮಾಡಲಾಗುತ್ತಿದೆ. ಕಸದ ಬುಟ್ಟಿ ವಿತರಣಾ ಕಾರ್ಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಚಾಲನೆ ನೀಡಿದರು.

ಮಹಾನಗರ ಪಾಲಿಕೆ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಕಸದ ಬುಟ್ಟಿಗಳನ್ನು ವಿತರಿಸಲಾಯಿತು.

84 ಸಾವಿರ ಮನೆಗಳಿಗೆ ಕಸದ ಬುಟ್ಟಿ

ADVT JULY NANJAPPA HOSPITAL HOME LAB TESTING

ಶಿವಮೊಗ್ಗದ ಪ್ರತಿ ಮನೆಗೂ ಕಸದ ಬುಟ್ಟಿ ವಿತರಣೆ ಮಾಡಲಾಗುತ್ತಿದೆ. 84,300 ಮನೆಗಳಿಗೆ ಕಸದ ಬುಟ್ಟಿ ವಿತರಿಸಲಾಗುತ್ತಿದೆ. ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕ ಬುಟ್ಟಿಯಲ್ಲಿ ಹಾಕಬೇಕಿದೆ. ಈ ಹಿನ್ನೆಲೆಯಲ್ಲಿ ಪ್ರತಿ ಮನೆಗೆ ಎರಡು ಪ್ರತ್ಯೇಕ ಬಣ್ಣದ ಕಸದ ಬುಟ್ಟಿ ವಿತರಿಸಲಾಗುತ್ತಿದೆ. ನೀಲಿ ಮತ್ತು ಹಸಿರು ಬಣ್ಣದ 1,65,600 ಕಸದ ಬುಟ್ಟಿ ವಿತರಣೆಗೆ ಯೋಜಿಸಲಾಗಿದೆ. 1.38 ಕೋಟಿ ರೂ. ವೆಚ್ಚದಲ್ಲಿ ಕಸದ ಬುಟ್ಟಿಗಳನ್ನು ಖರೀದಿಸಲಾಗಿದೆ.

ಇದನ್ನು ಓದಿ | ಶಿವಮೊಗ್ಗ ಮೇಯರ್’ಗೆ ಪ್ರಧಾನಿ ಕಚೇರಿಯಿಂದ ಆಹ್ವಾನ, ಇವತ್ತು ದೆಹಲಿಗೆ

ಮೇಯರ್ ಸುನೀತಾ ಅಣ್ಣಪ್ಪ, ಉಪ ಮೇಯರ್ ಶಂಕರ್ ಗನ್ನಿ, ಪಾಲಿಕೆ ಆಡಳಿತ ಪಕ್ಷದ ನಾಯಕ ಎಸ್.ಎನ್.ಚನ್ನಬಸಪ್ಪ, ಕಾಂಗ್ರೆಸ್ ಪಕ್ಷದ ಕಾರ್ಪೊರೇಟರ್ ಹೆಚ್.ಸಿ.ಯೋಗೇಶ್, ಕಮಿಷನರ್ ಚಿದಾನಂದ ವಟಾರೆ,  ಕಾರ್ಪೊರೇಟರ್’ಗಳು ಸೇರಿದಂತೆ ಹಲವರು ಇದ್ದರು.

palike%2B4
ಕಸದ ಬುಟ್ಟಿ ವಿತರಿಸಿದ ಸಚಿವ ಈಶ್ವರಪ್ಪ

palike%2B2

palike%2B1
ದೆಹಲಿಗೆ ತೆರಳುತ್ತಿರುವ ಮೇಯರ್ ಸುನೀತಾ ಅಣ್ಣಪ್ಪ ಅವರಿಗೆ ಸನ್ಮಾನ

palike%2B3

1632381434119645 4

(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್ ಮೂಲಕ ಸುದ್ದಿಗಾಗಿ 7411700200

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ಸೆಪ್ಟೆಂಬರ್ 30, 2021

Leave a Comment