ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 19 ಅಕ್ಟೋಬರ್ 2021
ದೀಪಾವಳಿ ಹಬ್ಬದ ಪ್ರಯುಕ್ತ ಶಿವಮೊಗ್ಗದಲ್ಲಿ ಅರ್ಬನ್ ಇಂಡಿಯಾದಿಂದ ವಸ್ತು ಪ್ರದರ್ಶನ ಆಯೋಜಿಸಲಾಗಿದೆ. ವಿವಿಧ ರಾಜ್ಯಗಳ ಸೀರೆಗಳು, ಕರಕುಶಲ ಹಾಗೂ ಅಲಂಕಾರಿಕ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಮೇಳದ ಸಂಘಟಕಿ ನಿರಂಜನಿ ರವೀಂದ್ರ ಹೇಳಿದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರಂಜನಿ ರವೀಂದ್ರ, ನಗರದ ರಾಯಲ್ ಆರ್ಕಿಡ್ ಸೆಂಟ್ರಲ್ ಹೋಟೆಲ್’ನ ಸೀಸನ್ ಹಾಲ್ ಸಂಭಾಗಣದಲ್ಲಿ ಅಕ್ಟೋಬರ್ 20 ಹಾಗೂ 21 ರಂದು ಪ್ರದರ್ಶನ ಮತ್ತು ಮಾರಾಟ ಆಯೋಜಿಸಲಾಗಿದೆ.
ಮಾರಾಟ ಮತ್ತು ಪ್ರದರ್ಶನ ಮೇಳದಲ್ಲಿ ದೇಶದ ಪ್ರಸಿದ್ಧ ಬ್ರಾಂಡ್ ಗಳ ದೊರೆಯಲಿವೆ. ಜೊತೆಗೆ ಅರ್ಬನ್ ಇಂಡಿಯಾದ ವಿಶಿಷ್ಟ ಶಾಂಪಿಂಗ್ ಅನುಭವವನ್ನು ಈ ಮೇಳ ನೀಡಲಿದೆ. ರಾಜ್ಯದ ವಿವಿಧೆಡೆಯ ಡಿಸೈನರ್ಸ್ ಜೊತೆ ನಮ್ಮ ಶಿವಮೊಗ್ಗದ ಡಿಸೈನರ್ ಹಾಗೂ ರಿಟೇಲರ್ಸ್ ಗಳು ಮಾರಾಟ ಮತ್ತು ಪ್ರದರ್ಶನ ಮೇಳದಲ್ಲಿ ಭಾಗವಹಿಸಲಿದ್ದಾರೆ ಎಂದರು.
ವಾರಣಾಸಿಯಲ್ಲಿ ಕೈಮಗ್ಗದಿಂದ ನೇಯ್ದ ಬನಾರಸ್ ಸಿಲ್ಕ್ಸ್ ಹಾಗೂ ಕಾಟನ್ ಸೀರೆಗಳು ದೊರೆಯಲಿವೆ. ಇದರ ಜೊತೆ ಸ್ಥಳೀಯವಾಗಿ ಸಿದ್ಧವಾದ ಸಾವಯುವ ಜೇನುತುಪ್ಪ, ಸೌಂದರ್ಯವರ್ಧಕ ಸಾಧನಗಳು, ವಿವಿಧ ಸಾಬೂನುಗಳು ಬಗೆಬಗೆಯ ಕೇಕ್ ಹಾಗೂ ಚಾಕೋಲೇಟ್ ಗಳು ದೊರೆಯಲಿದೆ ಎಂದರು.