ಶಿವಮೊಗ್ಗ ಲೈವ್.ಕಾಂ |HOLEHONNURU NEWS | 24 ಅಕ್ಟೋಬರ್ 2021
ಶಿವಮೊಗ್ಗ ಲೈವ್ನ ಪ್ರತಿ ಅಪ್ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್ಗಳನ್ನು ಜಾಯಿನ್ ಆಗಿ:
ಜಮೀನಿನಲ್ಲಿ ಬೆಳೆದಿದ್ದ ಸುಮಾರು ಮೂರೂವರೆ ವರ್ಷದ ಅಡಕೆ ಸಸಿಗಳನ್ನು ದುಷ್ಕರ್ಮಿಗಳು ರಾತ್ರೋರಾತ್ರಿ ಕಡಿದು ಹಾಕಿದ್ದಾರೆ. 39 ಸಸಿಗಳಿಗೆ ಕೊಡಲಿ ಬೀಸಲಾಗಿದೆ.
ಭದ್ರಾವತಿ ತಾಲೂಕು ದಾಸರ ಕಲ್ಲಹಳ್ಳಿಯಲ್ಲಿ ಘಟನೆ ಸಂಭವಿಸಿದೆ. ಅಣ್ಣಪ್ಪ ಎಂಬುವವರಿಗೆ ಸೇರಿದ ತೋಟದಲ್ಲಿ ಅಡಕೆ ಸಸಿಗಳನ್ನು ಕಡಿಯಲಾಗಿದೆ.

ಸಂಜೆ ಅಣ್ಣಪ್ಪ ಅವರ ಚಿಕ್ಕಪ್ಪ ತೋಟದಲ್ಲಿ ದನಗಳನ್ನು ಮೇಯಿಸಿಕೊಂಡು ಬಂದಿದ್ದಾರೆ. ಆಗ ತೋಟದಲ್ಲಿ ಎಲ್ಲಾ ಸಸಿಗಳು ಚನ್ನಾಗಿದ್ದವು. ಬೆಳಗ್ಗೆ ಪಕ್ಕದ ಜಮೀನಿನ ಮಾಲೀಕರು ಅಣ್ಣಪ್ಪ ಅವರ ಮನೆ ಬಳಿಗೆ ಬಂದು ಯಾರೋ ಸಸಿಗಳನ್ನು ಕಡಿದಿದ್ದಾರೆ ಎಂದು ತಿಳಿಸಿದ್ದಾರೆ. ಮನೆಯವರೆಲ್ಲ ತೋಟಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ.
ದುಷ್ಕರ್ಮಿಗಳು 39 ಸಸಿಗಳನ್ನು ಕೊಡಲಿಯಿಂದ ಕಡಿದು ಹಾಕಿರುವ ಶಂಕೆ ಇದೆ. ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
LATEST NEWS
- ಮನೆಯನ್ನೇ ಬಂದೂಕು ಕಾರ್ಖಾನೆ ಮಾಡಿಕೊಂಡಿದ್ದ ಕಾರ್ಪೆಂಟರ್, ಎಲ್ಲಿ? ಎಷ್ಟು ಬಂದೂಕು ಸಿಕ್ತು?

- ಕಾಂಗ್ರೆಸ್ನದ್ದು ‘3-C ಸರ್ಕಾರ’, ಮಿನಿಸ್ಟರ್ ರಾಜೀನಾಮೆಗೆ ಶಿವಮೊಗ್ಗದಲ್ಲಿ ಆಗ್ರಹ, ಏನಿದು ಮೂರು C?

- ಶಿವಮೊಗ್ಗ ಸಿಟಿಯ ವಿವಿಧೆಡೆ ಫೆಬ್ರವರಿ 6, 7ರಂದು ಕರೆಂಟ್ ಇರಲ್ಲ, ಎಲ್ಲೆಲ್ಲಿ? ಕಾರಣವೇನು?

- ಶಿವಮೊಗ್ಗ, ಭದ್ರಾವತಿಯಲ್ಲಿ ತುಸು ತಗ್ಗಿದ ತಾಪಮಾನ, ಉಳಿದ ತಾಲೂಕುಗಳಲ್ಲಿ ಹೇಗಿರಲಿದೆ?

- ಪೂಜಾ ಗೌಡ ನಂಬಿ ಅರ್ಧ ಕೋಟಿ ಹಣ ಕಳೆದುಕೊಂಡ ಶಿವಮೊಗ್ಗದ ಸೇಲ್ಸ್ಮನ್, ಆಗಿದ್ದೇನು?

About The Editor
ನಿತಿನ್ ಆರ್.ಕೈದೊಟ್ಲು






