ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SAGARA NEWS | 27 ನವೆಂಬರ್ 2021
ಮನೆ ಹೆಂಚು ಇಳಿಸಿ ಕಳ್ಳತನ ಮಾಡಿದ್ದ ಪ್ರಕರಣ ಸಂಬಂಧ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ. ಆತನಿಂದ ಆರು ಲಕ್ಷಕ್ಕೂ ಹೆಚ್ಚು ಮೊತ್ತದ ಚಿನ್ನಾಭರಣ ಮತ್ತು ಒಂದು ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆಯಲಾಗಿದೆ.
ಹೊಳೆಹೊನ್ನೂರಿನ ಸುರೇಶ್ (24) ಬಂಧಿತ ಆರೋಪಿ. ಈತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.
ಏನಿದು ಪ್ರಕರಣ?
ಸಾಗರದ ಬೆಳಲಿಮಕ್ಕಿಯ ಮೊದಲ ಅಡ್ಡರಸ್ತೆಯ ಕಮಲಾಕರ ಎಂಬುವವರ ಮನೆ ಕಳ್ಳತನವಾಗಿತ್ತು. ಮನೆ ಹೆಂಚು ತೆಗೆದು ಅಟ್ಟದ ಮೇಲೆ ಇಳಿದು ಕೃತ್ಯ ಎಸಗಲಾಗಿತ್ತು. ಕೊಠಡಿಯಲ್ಲಿದ್ದ ಕಬ್ಬಿಣದ ಬೀರು ಬಾಗಿಲು ಮೀಟಿ ಚಿನ್ನಾಭರಣ ಕಳವು ಮಾಡಲಾಗಿತ್ತು. ನವೆಂಬರ್ 2ರಂದು ಕಳ್ಳತನವಾಗಿತ್ತು.
ಸಿಕ್ಕಿಬಿದ್ದ ಖದೀಮ
ಪ್ರಕರಣದ ತನಿಖೆಗೆ ವಿಶೇಷ ತಂಡ ರಚಿಸಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಭದ್ರಾವತಿಯ ಹೊಳೆಹೊನ್ನೂರಿನ ಅದ್ರಿಹಳ್ಳಿಯ ಸುರೇಶ್ ಅಲಿಯಾಸ್ ಸೂರಿ ಎಂಬಾತನನ್ನು ಬಂಧಿಸಲಾಗಿದೆ. 6.98 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಒಂದು ಬೈಕ್ ವಶಕ್ಕೆ ಪಡೆಯಲಾಗಿದೆ.
ಸಾಗರ ಉಪ ವಿಭಾಗದ ಎಎಸ್’ಪಿ ರೋಹನ್ ಜಗದೀಶ್ ಮೇಲ್ವಿಚಾರಣೆಯಲ್ಲಿ ಸಾಗರ ಠಾಣೆ ಇನ್ಸ್ ಪೆಕ್ಟರ್ ಕೃಷ್ಣಪ್ಪ, ಪಿಎಸ್ಐ ಟಿ.ಡಿ.ಸಾಗರ್ ಕರ್, ಕಾರ್ಗಲ್ ಠಾಣೆ ಪಿಎಸ್ಐ ಜಿ.ತಿರುಮಲೇಶ್, ಸಿಬ್ಬಂದಿಗಳಾದ ಸಂತೋಷ್ ನಾಯ್ಕ, ಹಜರತ್ ಅಲಿ, ಶ್ರೀಧರ್, ಮೋಹನ್, ಪ್ರಕಾಶ್ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422