ಕೂಡಲಿಯಲ್ಲಿ ಮತ್ತೆ ಆತಂಕ, ಸ್ನಾನಘಟ್ಟದ ಬಳಿಗೆ ಬಂದು ಕುಳಿತ ಮೊಸಳೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 3 ಡಿಸೆಂಬರ್ 2021

ತುಂಗಾ, ಭದ್ರಾ ಸಂಗಮ ಸ್ಥಳ ಕೂಡಲಿಯಲ್ಲಿ ಮತ್ತೆ ಮೊಸಳೆ ಭೀತಿ ಎದುರಾಗಿದೆ. ಇವತ್ತು ಬೆಳಗ್ಗೆಯಿಂದ ಮೊಸಳೆಯು ಸ್ನಾನ ಘಟದ ಬಳಿಗೆ ಬಂದು ಕುಳಿತಿದೆ.

ADVT JULY NANJAPPA HOSPITAL HOME LAB TESTING

ಕಳೆದ ವಾರ ಸ್ನಾನ ಘಟ್ಟದ ಎದುರು ಭಾಗದಲ್ಲಿ ಮೊಸಳೆ ಕಾಣಿಸಿಕೊಂಡಿತ್ತು. ಇವತ್ತು ಸ್ನಾನ ಘಟ್ಟದ ಬಳಿಗೆ ಬಂದು ಕುಳಿತಿದೆ. ಇದು ಸ್ಥಳೀಯರು ಮತ್ತು ಪ್ರವಾಸಿಗರ ಆತಂಕಕ್ಕೆ ಕಾರಣವಾಗಿದೆ.

ದಡದಲ್ಲೇ ನಿಂತ ಭಕ್ತರು

ಸ್ನಾನ ಘಟ್ಟದ ಬಳಿಗೆ ಮೊಸಳೆ ಬಂದಿರುವುದು ಬೆಳಗ್ಗೆ ಗೊತ್ತಾಗಿದೆ. ವಿವಿಧ ಪೂಜೆಗೆ ಬಂದು, ಪುಣ್ಯ ಸ್ನಾನ ಮಾಡಲು ಅಣಿಯಾಗಿದ್ದವರಿಗೆ ಸ್ಥಳೀಯರು ಮೊಸಳೆ ಇರುವ ವಿಚಾರ ತಿಳಿಸಿದ್ದಾರೆ. ಹಾಗಾಗಿ ಪುಣ್ಯ ಸ್ನಾನಕ್ಕೆ ಬಂದವರು ಸ್ನಾನ ಘಟ್ಟದ ಮೆಟ್ಟಿಲುಗಳ ಮೇಲೆ ನಿಂತಿದ್ದಾರೆ.

ಮೊಸಳೆ ಹಿಡಿಸುವಂತೆ ಆಗ್ರಹ

ಕಳೆದ ಕೆಲವು ದಿನದಿಂದ ಮಳೆ ಸುರಿದಿದ್ದು, ಹೊಳೆಯಲ್ಲಿ ನೀರಿನ ಹರಿವು ಹೆಚ್ಚಾಗಿತ್ತು. ನೀರಿನ ಸೆಳೆತದೊಂದಿಗೆ ಮೊಸಳೆ ಕೂಡಲಿ ಭಾಗಕ್ಕೆ ಬಂದಿರುವ ಬಗ್ಗೆ ಶಂಕೆ ಇದೆ. ಪದೇ ಪದೇ ಮೊಸಳೆ ಕಾಣಿಸಿಕೊಳ್ಳುತ್ತಿದ್ದು, ಸ್ಥಳೀಯರು ಮತ್ತು ಪ್ರವಾಸಿಗರಲ್ಲಿ ಭೀತಿ ಉಂಟು ಮಾಡಿದೆ. ಅರಣ್ಯ ಇಲಾಖೆಯವರು ಮೊಸಳೆಯನ್ನು ಹಿಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

shivamogga live subscribe band

ತುಂಗಾ, ಭದ್ರಾ ಸಂಗಮ ಸ್ಥಳ ಕೂಡಲಿಯಲ್ಲಿ ನೀರಿನಲ್ಲಿ ಮಿಂದೆದ್ದರೆ ಪುಣ್ಯ ಪ್ರಾಪ್ತಿಯಾಗಲಿದೆ ಎಂಬ ನಂಬಿಕೆಯಿದೆ. ಹಾಗಾಗಿ ನಿತ್ಯ ಇಲ್ಲಿಗೆ ಭಕ್ತರು ಭೇಟಿ ಕೊಡುತ್ತಾರೆ. ಸ್ಥಳೀಯರು ಮುನ್ನೆಚ್ಚರಿಕೆ ನೀಡಿದರೂ ಕೆಲವೊಮ್ಮೆ ಭಕ್ತರು ಕ್ಯಾರೆ ಅನ್ನದೆ ಹೊಳೆಗೆ ಇಳಿಯುತ್ತಾರೆ. ಇಂತಹ ಸಂದರ್ಭ ಅನಾಹುತವಾಗುವ ಸಾಧ್ಯತೆ ಇದೆ ಎಂದು ಇಲ್ಲಿನವರು ಆರೋಪಿಸುತ್ತಾರೆ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment