ಶರಾವತಿ ನದಿಯಲ್ಲಿ ಮುಳುಗಿತು ಅಡಕೆ ಚೀಲ ತುಂಬಿದ್ದ ತೆಪ್ಪ, ಒಬ್ಬ ನೀರುಪಾಲು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | HOSANGARA NEWS | 13 ಡಿಸೆಂಬರ್ 2021

ಅಡಕೆ ತುಂಬಿದ್ದ ಚೀಲ ಸಾಗಿಸುವಾಗ ಉಕ್ಕಡ ಮಗುಚಿ ಶರಾವತಿ ನದಿಯಲ್ಲಿ ಮುಳುಗಿ, ಇಬ್ಬರ ಪೈಕಿ ಒಬ್ಬ ನೀರು ಪಾಲಾಗಿದ್ದಾರೆ. ಹೊಸನಗರ ತಾಲೂಕು ನಿಟ್ಟೂರು ಸಮೀಪದ ಕೋಸ್ನಾಡಿ ಬಳಿ ಘಟನೆ ಸಂಭವಿಸಿದೆ.

AVvXsEgs2CAQQwFXPEeKJ0M8TIYSuTjC1YFP87yReiHpVPmRryODfVeCXuFAqftB8kOZ5mPWZitv CEgSxJ 0UftK 3Xtg FQnjiLvzYXdPYIyMcbnCizoegDYgVDMGV3v1L2lUIeE2 3X339z1W9X2I3kEIgBbfYiP ZYP9tZPaJV64qH Ith d6U8fBL4P5A=s926

ನಿಟ್ಟೂರಿನ ಮಾವಿನಗುಡ್ಡೆಯ ಸ್ವಾಮಿ ಮತ್ತು ಚಂಗೊಳ್ಳಿ ನಾರಾಯಣ ಅವರು ಭಾನುವಾರ ಮಧ್ಯಾಹ್ನ ಅಡಕೆ ಚೀಲಗಳನ್ನು ಉಕ್ಕಡಕ್ಕೆ ತುಂಬಿಕೊಂಡು ಹೊಳೆ ದಾಟುತ್ತಿದ್ದರು. ಈ ಸಂದರ್ಭ ಉಕ್ಕಡ ಮುಳುಗಿದೆ.

ಈಜಲಾಗದ ಮುಳುಗಿದರು

ನಾರಾಯಣ ತಕ್ಷಣ ಈಜಿ ದಡ ಸೇರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ವಾಮಿ (45) ಅವರಿಗೆ ಈಜಿಲು ಸಾಧ್ಯವಾಗದೆ ನೀರಿನಲ್ಲಿ ಮುಳುಗಿದ್ದಾರೆ.

ವಿಚಾರ ತಿಳಿದು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಸ್ವಾಮಿ ಹುಡುಕಲು ಕಾರ್ಯಾಚರಣೆ ನಡೆಸಿದರು. ಈ ಸಂದರ್ಭ ನೀರಿನಲ್ಲಿ ಮುಳುಗಿದ್ದ ಉಕ್ಕಡ ಮತ್ತು ಅಡಕೆ ಚೀಲಗಳನ್ನು ಮೇಲೆತ್ತಲಾಗಿದೆ. ಸಂಜೆವರೆಗೆ ಕಾರ್ಯಾರಣೆ ನಡೆಸಿದರೂ ಸ್ವಾಮಿ ಪತ್ತೆಯಾಗಿಲ್ಲ.

ಇವತ್ತು ಬೆಳಗ್ಗೆಯಿಂದ ಪುನಃ ಕಾರ್ಯಾಚರಣೆ ನಡೆಸಿ ಸ್ವಾಮಿ ಪತ್ತೆ ಕಾರ್ಯ ನಡೆಸಲಾಗುತ್ತದೆ. ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.shivamogga live subscribe band

 

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment