ಎಲ್ಲಾ ಚುನಾವಣೆಗಿಂತ ಡಿಫರೆಂಟ್ ಈ ಮತ ಏಣಿಕೆ ಪ್ರಕ್ರಿಯೆ, ಹೇಗಿರುತ್ತೆ ಏಣಿಕೆ ಕಾರ್ಯ?

ಶಿವಮೊಗ್ಗ ಲೈವ್.ಕಾಂ | SHIMOGA LIVE NEWS | 14 ಡಿಸೆಂಬರ್ 2021 ➤ ಸುದ್ದಿಯ ಮುಂದಿನ 9 ಪ್ಯಾರಾಗಳು ಕೆಳಗಿವೆ.

ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್’ಗೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಆರಂಭವಾಗಿದೆ. ಸೋಲು, ಗೆಲುವಿನ ಲೆಕ್ಕಾಚಾರಗಳು ಗರಿಗೆದರಿವೆ. ಮಧ್ಯಾಹ್ನದ ವೇಳೆಗೆ ಫಲಿತಾಂಶ ಹೊರಬೀಳುವ ನಿರೀಕ್ಷೆ ಇದೆ.

ADVT JULY NANJAPPA HOSPITAL HOME LAB TESTING

ಈ ಚುನಾವಣೆಯಲ್ಲಿನ ಮತ ಎಣಿಕೆಯ ಮಾದರಿಗೂ ಉಳಿದ ಚುನಾವಣೆಗಳ ಮತ ಎಣಿಕೆಗೂ ವ್ಯತ್ಯಾಸವಿದೆ. ಹಾಗಾಗಿಯೇ 4158 ಮತ ಎಣಿಕೆ ಕಾರ್ಯ ಮಧ್ಯಾಹ್ನದವರೆಗೂ ತಗುಲಲಿದೆ.

ಹೇಗಿರುತ್ತೆ ಮತ ಎಣಿಕೆ ಕಾರ್ಯ?

ಹಂತ 1 – ಸ್ಟ್ರಾಂಗ್ ರೂಂನಲ್ಲಿರುವ 365 ಮತಪೆಟ್ಟಿಗೆಗಳನ್ನು ಎಣಿಕೆ ಕೊಠಡಿಗೆ ತರಲಾಗುತ್ತದೆ. ನಿರ್ದಿಷ್ಟ ಸಂಖ್ಯೆಯ ಮತಪೆಟ್ಟಿಗೆಗಳನ್ನು ಮಾತ್ರ ಸ್ಟ್ರಾಂಗ್ ರೂಂನಿಂದ ಹೊರ ತರಲಾಗುತ್ತದೆ. ಅವುಗಳ ಮೇಲಿನ ಸೀಲ್ ಪರಿಶೀಲನೆ ನಡೆಸಲಾಗುತ್ತದೆ. ಆ ಬಳಿಕ ಪಕ್ಷದ ಏಜೆಂಟರ ಮುಂದೆ ಮತ ಪೆಟ್ಟಿಗೆಯಲ್ಲಿರುವ ಮತಪ್ರಗಳನ್ನು ಹೊರ ತೆಗೆದು ಟ್ರೇ ಒಂದರಲ್ಲಿ ಸುರಿಯಲಾಗುತ್ತದೆ. ಎಷ್ಟು ಮತಗಳು ಚಲಾವಣೆಯಾಗಿವೆ ಎಂಬುದನ್ನು ಎಣಿಕೆ ಮಾಡಲಾಗುತ್ತದೆ.

ಹಂತ 2 – ಮತ ಪತ್ರಗಳನ್ನು ಮಿಶ್ರಣ ಮಾಡಿದ ಬಳಿಕ 25 ಮತಪತ್ರಗಳನ್ನು ಎಣಿಸಿ, ಒಂದೊಂದು ಬಂಡಲ್ ಸಿದ್ಧಪಡಿಸಲಾಗುತ್ತದೆ. ಪ್ರತಿ ಕಟ್ಟನ್ನು ಒಂದೆಡೆ ಇರಿಸಲಾಗುತ್ತದೆ.

ಹಂತ 3 – ಮತಪತ್ರಗಳ ಬಂಡಲ್’ಗಳನ್ನು ಮಿಶ್ರಣ ಮಾಡಲಾಗುತ್ತದೆ. ಯಾವ ಸ್ಥಳೀಯ ಸಂಸ್ಥೆಯಲ್ಲಿ ಯಾವ ಅಭ್ಯರ್ಥಿಗೆ ಎಷ್ಟು ಮತ ಚಲಾವಣೆಯಾಗಿದೆ ಎಂಬುದು ತಿಳಿಯಬಾರದು ಎಂದು ಹೀಗೆ ಮಾಡಲಾಗುತ್ತದೆ.

shivamogga live subscribe New Kannada

ಹಂತ 4 – ಮತ ಎಣಿಕೆಗೆ 14 ಟೇಬಲ್’ಗಳನ್ನು ನಿಗದಿ ಪಡಿಸಲಾಗಿದೆ. ಪ್ರತಿ ಟೇಬಲ್’ನಲ್ಲಿ ಮೂವರು ಅಧಿಕಾರಿಗಳು ಮತ ಎಣಿಕೆ ಕಾರ್ಯ ನಡೆಸಲಿದ್ದಾರೆ. ಏಜೆಂಟರು, ಅಭ್ಯರ್ಥಿಗಳ ಸಮ್ಮುಖದಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ.

ಹಂತ 5 – ಸಿಂಧು, ಅಸಿಂಧು ಮತಗಳನ್ನು ಪ್ರತ್ಯೇಕ ಮಾಡಲಾಗುತ್ತದೆ. ಬಳಿಕ ಪ್ರಥಮ ಪ್ರಾಶಸ್ತ್ಯದ ಮತಗಳ ಎಣಿಕೆ ನಡೆಯಲಿದೆ. ನಂತರ ಎರಡನೆ ಪ್ರಾಶಸ್ತ್ಯದ ಮತಗಳ ಎಣಿಸಲಾಗುತ್ತದೆ. ಹೆಚ್ಚು ಮತಗಳನ್ನ ಪಡೆದವರು ವಿಜಯಶಾಲಿ ಎಂದು ಘೋಷಣೆ ಮಾಡಲಾಗುತ್ತದೆ.

ಇದನ್ನೂ ಓದಿ | ಸಹ್ಯಾದ್ರಿ ಕಾಲೇಜು ಸುತ್ತಮುತ್ತ ನಿಷೇಧಾಜ್ಞೆ, ಶಿವಮೊಗ್ಗ ಸಿಟಿಯಲ್ಲಿ ಮದ್ಯ ಮಾರಾಟ ನಿಷೇಧ

ನಾಲ್ಕು ಸಾವಿರ ಮತಗಳಿದ್ದರೂ ಮತದಾರರ ಗೌಪ್ಯತೆ ಕಾಪಾಡುವ ದೃಷ್ಟಿಯಿಂದ ಹೆಚ್ಚು ಪ್ರಕ್ರಿಯೆಗಳು ಇರಲಿವೆ. ಹಾಗಾಗಿಯೇ ಎಣಿಕೆ ಕಾರ್ಯ ನಿಧಾನಗತಿ ಇರಲಿದೆ.

ಇದನ್ನೂ ಓದಿ | ಶಿವಮೊಗ್ಗದಲ್ಲಿ ಮತ ಎಣಿಕೆ, ಸ್ಟ್ರಾಂಗ್ ರೂಂನಿಂದ ಹೊರ ಬಂದ ಮತಪೆಟ್ಟಿಗೆಗಳು

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Leave a Comment

ಮುಂದಿನ ಸುದ್ದಿ ಓದಿ TRENDING

ಶಿವಮೊಗ್ಗದಲ್ಲಿ ದೊಡ್ಡಪೇಟೆ ಠಾಣೆ ಪೊಲೀಸರ ದಾಳಿ, ₹65,000 ಮೌಲ್ಯದ ಮಾದಕ ವಸ್ತು ಸಹಿತ ಒಬ್ಬ ಅರೆಸ್ಟ್‌