ಶಿವಮೊಗ್ಗದಲ್ಲಿ ಶ್ರದ್ಧಾಭಕ್ತಿಯಿಂದ ಮೊಹರಂ ಆಚರಣೆ, ಕೆಂಡ ಹಾಯ್ದು ಭಕ್ತಿ ಸಮರ್ಪಣೆ

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS

ಶಿವಮೊಗ್ಗ: ಭಾವೈಕ್ಯತೆಯ ಪ್ರತೀಕವಾದ ಮೊಹರಂ ಹಬ್ಬವನ್ನು ನಗರದಲ್ಲಿ ಇಂದು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಹಬ್ಬದ ಅಂಗವಾಗಿ ನಗರದ ರಾಮಣ್ಣಶ್ರೇಷ್ಠಿ ಪಾರ್ಕ್ ಬಳಿ ಮುಸ್ಲಿಂ ಸಮುದಾಯದವರು ಕೆಂಡ ಹಾಯುವುದರ ಮೂಲಕ ಭಕ್ತಿ ಸಮರ್ಪಿಸಿದರು. ಹರಕೆ ಹೊತ್ತವರು ಹಾಗೂ ಭಕ್ತರು ಕೆಂಡದ ಹೊಂಡದಲ್ಲಿ ನಡೆದು ಸಾಗಿದ ದೃಶ್ಯ ಈ ಬಾರಿಯ ಆಚರಣೆಯ ಪ್ರಮುಖ ಆಕರ್ಷಣೆಯಾಗಿತ್ತು.

➤ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ಇದಕ್ಕೂ ಮುನ್ನ ನಗರದ ವಿವಿಧ ಬಡಾವಣೆಗಳಿಂದ ಹೂವುಗಳಿಂದ ಅಲಂಕೃತಗೊಂಡ ತಬೂತ್‌ಗಳನ್ನು ಮೆರವಣಿಗೆಯ ಮೂಲಕ ತಲೆಯ ಮೇಲೆ ಹೊತ್ತುಕೊಂಡು ತರಲಾಯಿತು. ಇನ್ನು, ಹಬ್ಬದ ಹಿನ್ನೆಲೆ ವಿವಿಧೆಡೆ ಬಂದೋಬಸ್ತ್‌ ನಿಯೋಜನೆ ಮಾಡಲಾಗಿತ್ತು.

Moharam-celebration-in-Shimoga

ವಿದ್ಯಾನಗರದಲ್ಲಿಯು ಮೊಹರಂ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಬಿ.ಹೆಚ್‌.ರಸ್ತೆ ಪಕ್ಕದಲ್ಲಿರುವ ಶ್ರದ್ಧಾ ಕೇಂದ್ರದಲ್ಲಿ ಈ ಭಾಗದ ಮುಸ್ಲಿಂ ಸಮುದಾಯದವರು ಪ್ರಾರ್ಥನೆ ನೆರವೇರಿಸಿದರು. ಇನ್ನು, ಜಿಲ್ಲೆಯ ವಿವಿಧೆಡೆಯು ಮೊಹರಂ ಹಬ್ಬ ಆಚರಿಸಲಾಯಿತು.