ಬಂಗಾರದ ನಾಣ್ಯದ ಹೆಸರಲ್ಲಿ ಲಕ್ಷ ಲಕ್ಷ ವಂಚನೆ, ಆನವಟ್ಟಿಯ ಇಬ್ಬರು ಅರೆಸ್ಟ್, ಕಂತೆ ಕಂತೆ ಹಣ ವಶಕ್ಕೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗದ ಲೈವ್.ಕಾಂ | ANAVATTI NEWS | 18 ಜನವರಿ 2022

ಬಂಗಾರದ ನಾಣ್ಯಗಳನ್ನು ಕೊಡುವುದಾಗಿ ನಂಬಿಸಿ ವಂಚನೆ ಮಾಡಿದ್ದ ಇಬ್ಬರನ್ನು ಆನವಟ್ಟಿ ಪೊಲೀಸರು ಬಂಧಿಸಿದ್ದು 4.22 ಲಕ್ಷ ರೂ. ನಗದು ಜಪ್ತಿ ಮಾಡಿದ್ದಾರೆ.

AVvXsEgvkqR5na6VBgyQ7GpgkZA0SK3TnlX05prWtKfmX8meEFOtOAl

ಅನವಟ್ಟಿ ಸಮೀಪದ ತಿಮ್ಲಾಪುರ ಗ್ರಾಮದ ಕೆ.ರಾಮಪ್ಪ (44) ಮತ್ತು ಶಿಕಾರಿಪುರ ತಾಲೂಕಿನ ಬನ್ನೂರು ಗ್ರಾಮದ ತಿಮ್ಮಪ್ಪ (65) ಬಂಧಿತರು. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಾಲಹಳ್ಳಿ ಗ್ರಾಮದ ಎಚ್.ಕೆ.ಚಂದ್ರಶೇಖರ್ ಮೋಸ ಹೋಗಿದ್ದವರು.

ವಂಚನೆ ಮಾಡಿದ್ದು ಹೇಗೆ?

2021ರ ಡಿಸೆಂಬರ್‌ನಲ್ಲಿ ಚಂದ್ರಶೇಖರ್ ಅವರಿಗೆ ಮೊಬೈಲ್ ಮೂಲಕ ಕರೆ ಮಾಡಿದ್ದ ಇಬ್ಬರೂ ರಘು ಮತ್ತು ಕೃಷ್ಣ ಎಂದು ಪರಿಚಯಿಸಿಕೊಂಡಿದ್ದರು. ಗ್ರಾಮದಲ್ಲಿ ಪರಿಚಯಸ್ಥರೊಬ್ಬರು ಮನೆ ಪಾಯ ತೆಗೆಯುವಾಗ ಬಂಗಾರದ ನಾಣ್ಯಗಳು ಸಿಕ್ಕಿವೆ. ಅವರಿಗೆ ತುರ್ತು ಹಣದ ಅವಶ್ಯಕತೆ ಇದೆ. ನಾಲ್ಕುವರೆ ಕೆಜಿಯಷ್ಟು ನಾಣ್ಯಗಳು ಸಿಕ್ಕಿದ್ದು ಒಂದು ಕೆಜಿಗೆ 10 ಲಕ್ಷ ರೂ. ಆಗಲಿದೆ. ನಿಮಗೆ ಮುಕ್ಕಾಲು ಕೆಜಿ ನಾಣ್ಯಗಳನ್ನು ಕೇವಲ 5 ಲಕ್ಷ ರೂ.ಗೆ ಕೊಡಿಸುವುದಾಗಿ ನಂಬಿಸಿದ್ದರು.

ಅದರಂತೆ ಜ.4ರಂದು ಆನವಟ್ಟಿ ಬಸ್ ನಿಲ್ದಾಣದ ಹತ್ತಿರ ಬರುವಂತೆ ಹೇಳಿದ್ದರು. ಅರ್ಧ ಕೆಜಿಯಷ್ಟು ನಾಣ್ಯಗಳನ್ನು ಕೊಟ್ಟು 5 ಲಕ್ಷ ರೂ. ಪಡೆದು ಕಳುಹಿಸಿದ್ದರು. ಸ್ವಗ್ರಾಮಕ್ಕೆ ತೆರಳಿದ ಬಳಿಕ ನಾಣ್ಯಗಳು ನಕಲಿ ಎಂಬುದು ಖಚಿತಗೊಂಡ ಚಂದ್ರಶೇಖರ್ ಅವರು, ಈ ಬಗ್ಗೆ ಜ.7ರಂದು ಆನವಟ್ಟಿ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಿಬ್ಬರನ್ನೂ ಬಂಧಿಸಿದ್ದಾರೆ.

ABOUT NEW DEC 2021 REPORT

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment