ಶಿವಮೊಗ್ಗ ಲೈವ್
ಶಿವಮೊಗ್ಗದ ಲೈವ್.ಕಾಂ | SHIMOGA NEWS | 2 ಫೆಬ್ರವರಿ 2022
ಲಾಡ್ಜ್ ಒಳಗೆ ಹೋಗಿ ಬರುವಷ್ಟರಲ್ಲಿ ಕಳ್ಳರು ಬೈಕ್ ಕಳ್ಳತನ ಮಾಡಿಕೊಂಡು ಹೋಗಿರುವ ಘಟನೆ ಶಿವಮೊಗ್ಗ ಬಿ.ಹೆಚ್.ರಸ್ತೆಯಲ್ಲಿ ಸಂಭವಿಸಿದೆ. ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.
ಈ ಸುದ್ದಿಯನ್ನೂ ಓದಿ
30ಕ್ಕೂ ಹೆಚ್ಚು ಮಾತ್ರೆ ನುಂಗಿದ ಮಹಿಳೆ, ಪೊಲೀಸರ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ, ಆಗಿದ್ದೇನು?
ಮಂಜುನಾಥ ಎಂಬುವವರಿಗೆ ಸೇರಿದ ಸುಜುಕಿ ಮ್ಯಾಕ್ಸ್ ಬೈಕ್ ಕಳ್ಳತನವಾಗಿದೆ. ಜನವರಿ 26ರಂದು ಮಂಜುನಾಥ ಅವರು ಬಿ.ಹೆಚ್.ರಸ್ತೆಯ ದುರ್ಗಾ ಲಾಡ್ಜ್ ಬಳಿ ಬೈಕ್ ನಿಲ್ಲಿಸಿ, ತೆರಳಿದ್ದರು. ಲಾಡ್ಜ್ ಮಾಲೀಕರನ್ನು ಮಾತನಾಡಿಸಿ ಹೊರಗೆ ಬರುವಷ್ಟರಲ್ಲಿ ಬೈಕ್ ನಾಪತ್ತೆಯಾಗಿತ್ತು.
ಎಲ್ಲೆಡೆ ಹುಡುಕಾಡಿದ ಮಂಜುನಾಥ ಅವರು ಬಳಿಕ ದೊಡ್ಡಪೇಟೆ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Shimoga Police | About Shivamogga Live