ಶಿವಮೊಗ್ಗ ವಿಮಾನ ನಿಲ್ದಾಣದಿಂದ 11 ಮಾರ್ಗಗಳಲ್ಲಿ ವಿಮಾನ ಹಾರಾಟಕ್ಕೆ ಮನವಿ, ಪಟ್ಟಿಯಲ್ಲಿ ಯಾವೆಲ್ಲ ಮಾರ್ಗಗಳಿವೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗದ ಲೈವ್.ಕಾಂ | SHIMOGA NEWS | 10 ಫೆಬ್ರವರಿ 2022

ಶಿವಮೊಗ್ಗ ವಿಮಾನ ನಿಲ್ದಾಣವನ್ನು ಹನ್ನೊಂದು ಪ್ರಮುಖ ಮಾರ್ಗಗಳ ಜೊತೆ ಸಂಪರ್ಕ ಕಲ್ಪಿಸಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಅವರು ಮನವಿ ಮಾಡಿದ್ದಾರೆ. ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಅವರನ್ನು ಇವತ್ತು ಭೇಟಿಯಾಗಿ ವಿಮಾನ ನಿಲ್ದಾಣ ಮತ್ತು ಮಾರ್ಗಗಳ ಕುರಿತು ಮನವಿ ಸಲ್ಲಿಸಿದರು.

Nanjappa Hospital Covid Care Center

ಬೆಂಗಳೂರು ಹೊರತುಪಡಿಸಿ ರಾಜ್ಯದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣವೇ ಅತಿದೊಡ್ಡ ರನ್ ವೇ ಹೊಂದಿದೆ. ಕರ್ನಾಟದ ಭೂಪಟದ ಮಧ್ಯ ಭಾಗದಲ್ಲಿ ಶಿವಮೊಗ್ಗ ಜಿಲ್ಲೆ ಇದೆ. ಆದ್ದರಿಂದ ಇಲ್ಲಿಂದ ಹನ್ನೊಂದು ಪ್ರಮುಖ ಮಾರ್ಗಗಳಿಗೆ ವಿಮಾನಯಾನ ಸಂಪರ್ಕ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಯಾವೆಲ್ಲ ಮಾರ್ಗಗಳಿಗೆ ಮನವಿ ಸಲ್ಲಿಸಲಾಯ್ತು?

ಸಂಸದ ಬಿ.ವೈ.ರಾಘವೇಂದ್ರ ಅವರು ಸಲ್ಲಿಸಿರುವ ಮನವಿಯಲ್ಲಿ 11 ಮಾರ್ಗಗಳಿಗೆ ಮನವಿ ಮಾಡಿದ್ದಾರೆ.

  1. ಮುಂಬೈ – ಶಿವಮೊಗ್ಗ – ಮುಂಬೈ
  2. ಮಂಬೈ – ಶಿವಮೊಗ್ಗ – ಮಂಗಳೂರು
  3. ಮುಂಬೈ – ಶಿವಮೊಗ್ಗ – ಚೆನ್ನೈ,
  4. ಮುಂಬೈ – ಶಿವಮೊಗ್ಗ – ತಿರುಪತಿ,
  5. ಶಿವಮೊಗ್ಗ – ಕಲಬುರಗಿ – ಹೈದರಾಬಾದ್,
  6. ಶಿವಮೊಗ್ಗ – ಕಲಬುರಗಿ – ದೆಹಲಿ,
  7. ಬೆಂಗಳೂರು – ಶಿವಮೊಗ್ಗ – ಬೆಳಗಾವಿ,
  8. ಬೆಂಗಳೂರು – ಶಿವಮೊಗ್ಗ – ದೆಹಲಿ,
  9. ಕೊಚ್ಚಿ – ಶಿವಮೊಗ್ಗ – ದೆಹಲಿ,
  10. ಬೆಂಗಳೂರು – ಶಿವಮೊಗ್ಗ – ಗೋವಾ,
  11. ಹೈದರಾಬಾದ್ – ಶಿವಮೊಗ್ಗ – ಕೊಚ್ಚಿ

ಈ ಮಾರ್ಗಗಳಿಗೆ ಕೂಡಲೆ ಟೆಂಡರ್ ಕರೆದು ವಿಮಾನ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು. ವ್ಯಾಪಾರ, ಉದ್ಯಮ ಮತ್ತು ಪ್ರವಾಸೋದ್ಯಮಕ್ಕೆ ಈ ಮಾರ್ಗಗಳು ಅನುಕೂಲಕರವಾಗಿವೆ ಎಂದು ಸಂಸದ ರಾಘವೇಂದ್ರ ಅವರು ಮನವಿಯಲ್ಲಿ ತಿಳಿಸಿದ್ದಾರೆ.

ವಿಮಾನ ನಿಲ್ದಾಣದ ಕಾಮಗಾರಿ ಬಿರುಸಿನಿಂದ ನಡೆಯುತ್ತಿದೆ. ಕೂಡಲೆ ಮಲ್ಟಿ ಡಿಸಿಪ್ಲಿನರಿ ಟೀಮ್ ಕಳುಹಿಸಬೇಕು ಎಂದು ಮನವಿ ಮಾಡಿದರು.

Shimoga Live news Reach Map

About Shivamogga LiveShimoga District Profile |Whatsapp Number 7411700200

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment