‘ಜಯ ರಾಮ, ಶ್ರೀರಾಮ ಎಂದುಕೊಂಡೆ ಹೋದ, ನಮ್ಮ ಕುಟಂಬಕ್ಕೆ ನ್ಯಾಯ ಬೇಕು’

ಶಿವಮೊಗ್ಗದ ಲೈವ್.ಕಾಂ | SHIMOGA NEWS | 21 ಫೆಬ್ರವರಿ 2022

ಹರ್ಷನನ್ನು ಹತ್ಯೆ ಮಾಡಿದ್ದು ಯಾರು ಅನ್ನುವುದು ಗೊತ್ತಿಲ್ಲ. ಆದರೆ ನಮ್ಮ ಕುಟುಂಬಕ್ಕೆ ನ್ಯಾಯ ಕೊಡಿಸಿ. ಜಯರಾಮ್ ಶ್ರೀರಾಮ್ ಎಂದು ಹೇಳಿಕೊಂಡೆ ಹೋದ ಎಂದು ಹತ್ಯೆಗೀಡಾದ ಹರ್ಷನ ಸಹೋದರಿ ಅಶ್ವಿನಿ ಅಳಲು ತೋಡಿಕೊಂಡಿದ್ದಾರೆ.

Shimoga Nanjappa Hospital Cancer Care

ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಶ್ವಿನಿ ಅವರು, ನಾನು ಚಿಕ್ಕಮಗಳೂರಿನಲ್ಲಿ ಇದ್ದೆ. ಫೋನ್ ಮಾಡಿ ನಿನ್ನ ತಮ್ಮನನ್ನು ಹೊಡೆದು ಹಾಕಿದ್ದಾರೆ ಎಂದರು. ವಾಟ್ಸಪ್’ನಲ್ಲಿ ವಿಡಿಯೋ, ಫೋಟೊ ಕಳುಹಿಸಿದರು. ಈಗ ನಾವು ಯಾರ ಬಳಿ ನ್ಯಾಯ ಕೇಳೋಣ ಎಂದರು.

ಹರ್ಷ ಯಾರಿಗೂ ತೊಂದರೆ ಮಾಡಿದವನಲ್ಲ. ಜಯರಾಮ್ ಶ್ರೀರಾಮ ಅಂದುಕೊಂಡೆ ಹೋದ. ಹತ್ಯೆ ಮಾಡಿದವರು ಯಾರು ಅನ್ನುವುದು ನಮಗೆ ಗೊತ್ತಿಲ್ಲ. ನಮ್ಮ ಕುಟುಂಬಕ್ಕೆ ನ್ಯಾಯ ಕೊಡಿಸಿ. ಹರ್ಷಾ ಹಿಂದೂ ಎಂದು ಹೆಸರಿಟ್ಟುಕೊಂಡಿದ್ದೆ ತಪ್ಪಾ ಎಂದು ಅಶ್ವಿನಿ ಪ್ರಶ್ನಿಸಿದ್ದಾರೆ.

ಗೃಹ ಸಚಿವರಿಗೆ ಮನವಿ

ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹರ್ಷನ ಕುಟುಂಬದವರನ್ನು ಭೇಟಿಯಾಗಿ ಸಾಂತ್ವನ ಹೇಳಿದರು. ಈ ಸಂದರ್ಭ ತಮ್ಮ ಸಹೋದರನ ಸಾವಿಗೆ ನ್ಯಾಯ ಕೊಡಿಸುವಂತೆ ಅಶ್ವಿನಿ ಅವರು ಮನವಿ ಮಾಡಿದರು.

ಇದನ್ನೂ ಓದಿ | ‘ಕೊಲೆ ಆರೋಪಿಗಳ ಸುಳಿವು ಪತ್ತೆ, ಸದ್ಯದಲ್ಲೇ ಅರೆಸ್ಟ್’

Shimoga Live News January Reach

ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : February 21, 2022 at 10:38 AM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಫೆಬ್ರವರಿ 21, 2022

Leave a Comment