ಶಿವಮೊಗ್ಗದಲ್ಲಿ ಸಿಟಿ ಬಸ್ ಸಂಚಾರ ಸ್ಥಗಿತ, ಹೇಗಿದೆ ಸರ್ಕಾರಿ ಸಾರಿಗೆ ವ್ಯವಸ್ಥೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗದ ಲೈವ್.ಕಾಂ | SHIMOGA NEWS | 22 ಫೆಬ್ರವರಿ 2022

ಕರ್ಫ್ಯೂ ಜಾರಿ ಆಗಿರುವ ಹಿನ್ನೆಲೆ ಶಿವಮೊಗ್ಗ ನಗರದಲ್ಲಿ ಬಸ್ ಸಂಚಾರ ಸ್ಥಗಿತವಾಗಿತ್ತು. ಸಿಟಿ ಬಸ್ಸುಗಳು ರಸ್ತೆಗೆ ಇಳಿಯದೆ ತುರ್ತು ಕೆಲಸಗಳಿಗೆ ಓಡಾಡುವರು ಸಂಕಷ್ಟಕ್ಕೀಡಾದರು.

Shimoga Nanjappa Hospital Cancer Care Center

ಶಿವಮೊಗ್ಗದ ಸಿಟಿ ಬಸ್ಸುಗಳು ಇವತ್ತು ಸಂಚಾರ ನಡೆಸಲಿಲ್ಲ. ಯಾವುದೆ ಬಸ್ಸುಗಳ ಸಂಚಾರ ನಡೆಸದೆ ಜನರು ಸಮಸ್ಯೆ ಅನುಭವಿಸಿದರು. ಅಗತ್ಯ ಮತ್ತು ತುರ್ತು ಕೆಲಸಕ್ಕೆ ತೆರಳುವವರು ಬಸ್ಸುಗಳಲ್ಲಿದೆ ಪರದಾಡಿದರು.

ಶಿವಮೊಗ್ಗ – ಭದ್ರಾವತಿ ಬಸ್ ಸಂಚಾರ

ಸರ್ಕಾರಿ ಬಸ್ಸುಗಳು ನಿರಂತರವಾಗಿ ಸಂಚರಿಸಿದವು. ಆದರೆ ನಗರದೊಳಗೆ ಬಸ್ಸುಗಳು ಬಾರದಂತೆ ಪೊಲೀಸರು ತಡೆದರು. ಬಸ್ಸುಗಳು ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಸೂಚಿಸಲಾಗಿತ್ತು. ಶಿವಮೊಗ್ಗ – ಭದ್ರಾವತಿ ನಡುವಿನ ಬಸ್ಸುಗಳ ಸಂಚಾರ ಎಂದಿನಂತೆ ಇತ್ತು. ಕೆಲುವು ಹೊತ್ತು ಬಸ್ಸುಗಳು ನಿಲ್ದಾಣದಿಂದ ಹೊರಡುವ ಬದಲು ಎಂ.ಆರ್.ಎಸ್ ಸರ್ಕಲ್’ನಿಂದ ತೆರಳುತ್ತಿದ್ದವು.

ಖಾಸಗಿ ಬಸ್ಸುಗಳಿಗೆ ತಟ್ಟಿದ ಬಿಸಿ

ದೂರದ ಊರುಗಳಿಗೆ ತರಳುವ ಖಾಸಗಿ ಬಸ್ ಸಂಚಾರವು ಎಂದಿನಂತೆ ಇತ್ತು. ಈ ಬಸ್ಸುಗಳು ಕೂಡ ನಗರದ ಒಳಗೆ ಪ್ರವೇಶಿಸದ ಹಾಗೆ ಸೂಚಿಸಲಾಗಿತ್ತು. ಮತ್ತೊಂದೆ ಉದ್ವಿಗ್ನ ಪರಿಸ್ಥಿತಿ ಮತ್ತು ಕರ್ಫ್ಯೂ ಹಿನ್ನೆಲೆ ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು.

ಇದನ್ನೂ ಓದಿ | ಇವತ್ತು ಶಿವಮೊಗ್ಗ ನಗರ ಸಂಪೂರ್ಣ ಸ್ಥಬ್ಧ, ಅಂಗಡಿಗಳು ಬಂದ್

Shimoga Live News Age Wise Reach

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment