BREAKING | ರಾತ್ರೋರಾತ್ರಿ ಗ್ರಾಮದ ಮುಂದೆ ವಾಮಾಚಾರ, ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 3 ಮಾರ್ಚ್ 2022

ರಾತ್ರೋರಾತ್ರಿ ಗ್ರಾಮವೊಂದರ ಮುಂದೆ ವಾಮಾಚಾರ ಮಾಡಲಾಗಿದೆ. ಊರಿನ ಸಂಪರ್ಕ ರಸ್ತೆ ಸಮೀಪ ವಾಮಾಚಾರ ಮಾಡಿರುವುದು ಕಂಡು ಬಂದಿದೆ. ಇದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

Shimoga Nanjappa Hospital

ಹೊಸನಗರ ತಾಲೂಕು ಬೆನವಳ್ಳಿ ಗ್ರಾಮದ ಮುಂದೆ ವಾಮಾಚಾರ ಮಾಡಿರುವುದು ಕಂಡು ಬಂದಿದೆ. ರಂಗೋಲಿ ಹಿಟ್ಟಿನ ಗೊಂಬೆ, ಮೊಟ್ಟೆ, ಬಟ್ಟೆ, ಕೂದಲು ಸೇರಿದಂತೆ ಹಲವು ವಸ್ತುಗಳು ಪತ್ತೆಯಾಗಿವೆ.

ರಾತ್ರೋರಾತ್ರಿ ನಡೆದ ವಾಮಾಚಾರ

ಬೆನವಳ್ಳಿ ಮತ್ತು ಕೆಂಚನಾಲ ಗ್ರಾಮಗಳ ಗಡಿಯಲ್ಲಿ ವಾಮಾಚಾರ ಮಾಡಲಾಗಿದೆ. ಬುಧವಾರ ಸಂಜೆ ಗ್ರಾಮಸ್ಥರು ಈ ರಸ್ತೆಯಲ್ಲಿ ಬಂದಾಗ ಯಾವುದೆ ವಸ್ತುಗಳು ಕಾಣಿಸಿರಲಿಲ್ಲ. ಇವತ್ತು ಬೆಳಗ್ಗೆ ನೋಡಿದಾಗ ವಾಮಾಚಾರ ಮಾಡಿರುವುದು ಗೊತ್ತಾಗಿದೆ.

ಗ್ರಾಮಸ್ಥರಲ್ಲಿ ಮೂಡಿದ ಆತಂಕ

ಬೆನವಳ್ಳಿಯ ಸರ್ವೆ ನಂಬರ್ 36ರಲ್ಲಿ ವಾಮಾಚಾರ ನಡೆದಿದೆ. ಗ್ರಾಮಸ್ಥರು, ಶಾಲೆ ಮಕ್ಕಳು ಈ ಮಾರ್ಗವಾಗಿ ನಿತ್ಯ ಓಡಾಡುತ್ತಿದ್ದಾರೆ. ಇದರಿಂದ ಗ್ರಾಮದಲ್ಲಿ ಆತಂಕ ಮೂಡಿದೆ. ಈ ರಸ್ತೆಯಲ್ಲಿ ಓಡಾಡುವುದಕ್ಕೆ ಭಯ ಪಡುತ್ತಿದ್ದಾರೆ.

ಘಟನೆ ಕುರಿತು ಬೆನವಳ್ಳಿ ಗ್ರಾಮಸ್ಥರು ರಿಪ್ಪನ್ ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment