BSNL ವಿರುದ್ಧ ಗ್ರಾಮಸ್ಥರ ಸಿಟ್ಟು, ಅಧಿಕಾರಿಗಳಿಗೆ ಒಂದು ವಾರ ಗಡುವು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 7 ಮಾರ್ಚ್ 2022

ಬಿಎಸ್ಎನ್ಎಲ್ ಅಸಮರ್ಪಕ ಸಂಪರ್ಕದ ವಿರುದ್ಧ ಹೊಸನಗರ ತಾಲೂಕು ಅರಮನೆಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತಿಮನೆ ದೂರವಾಣಿ ಕೇಂದ್ರದ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಅಧಿಕಾರಿಗಳಿಗೆ ಒಂದು ವಾರದ ಗಡುವು ಕೂಡ ನೀಡಿದ್ದಾರೆ.

shimoga Nanjappa Hospital

ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವೇನು?

♦ ಮತ್ತಿಮನೆ ಕೇಂದ್ರದ ವ್ಯಾಪ್ತಿಯಲ್ಲಿ ಮತ್ತಿಮನೆ, ಸಮಗೋಡು, ಅರಮನೆಕೊಪ್ಪ, ಕಿರುಗುಳಿಗೆ, ಹಲಸಿನಕಟ್ಟೆ, ಓತನಾಡಿ, ತರುವೆ, ಕುಂದಗಲ್ಲು ಸೇರಿದಂತೆ ಹಲವು ಗ್ರಾಮಗಳು ಬರಲಿವೆ. ಇಲ್ಲಿ 250ಕ್ಕೂ ಹೆಚ್ಚು ಸ್ಥಿರ ದೂರವಾಣಿ ಸಂಪರ್ಕವಿದೆ.

♦ ಕಳೆದ ಎರಡು ವರ್ಷದಿಂದ ಬಿಎಸ್ಎನ್ಎಲ್ ಸಂಪರ್ಕ ಸಂಪೂರ್ಣ ಹದಗೆಟ್ಟಿದೆ. FTTH ಫೈಬರ್ ಕೇಬಲ್ ಸಂಪರ್ಕ ಪಡೆಯುವಂತೆ ಅಧಿಕಾರಿಗಳು ತಿಳಿಸಿದರು. ಅದರಂತೆ ಸಂಪರ್ಕ ಪಡೆಯಲಾಗಿದೆ. ಆದರೂ ದೂರವಾಣಿ ವ್ಯವಸ್ಥೆ ಸರಿಯಾಗಿಲ್ಲ.

♦ ಬಿಎಸ್ಎನ್ಎಲ್ ಅಧಿಕಾರಿಗಳಿಗೆ ಹಲವು ಭಾರಿ ಮನವಿ ಮಾಡಲಾಗಿದೆ. ಪ್ರಧಾನ ಮಂತ್ರಿ ಅವರಿಗೂ ಪತ್ರ ಬರೆಯಲಾಗಿದೆ. ಆದರೂ ಸಮರ್ಪಕ ಸೇವೆ ಒದಗಿಸಲು ಆಗಿಲ್ಲ. ಇನ್ನೊಂದು ವಾರದೊಳಗೆ ಸಮಸ್ಯೆ ಬಗೆಹರಿಯದಿದ್ದರೆ ಹೋರಾಟ ತೀವ್ರಗೊಳಿಸಲಾಗುತ್ತದೆ.

ಪ್ರತಿಭಟನೆಯಲ್ಲಿ ಡಿ.ಕೆ.ಚಂದ್ರಶೇಖರ್, ಎಸ್.ಶ್ರೀನಿವಾಸ್, ಹೆಚ್.ಆರ್.ಆದಿತ್ಯ, ಕೆ.ಟಿ.ಗುರುರಾಜ್, ಗಂಗಾಧರ ಕರಬ, ರಮೇಶ್, ಮುರುಳಿ, ನಾಗರಾಜ್, ಆದರ್ಶ, ಭೀಮೇಶ್, ಶ್ರೀನಿವಾಸ ಶೆಟ್ಟಿ, ವಿಷ್ಣು ಭಟ್, ದೀಪಕ್ ನಾಗರಾಜ್, ಚಂದ್ರಶೇಖರ್, ವೀಣಾ ಶ್ರೀನಿವಾಸ್ ಸೇರಿ ಹಲವರು ಇದ್ದರು.

ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ

ಈ ಮೇಲ್ – shivamoggalive@gmail.com

WhatsApp Number – 7411700200

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment