SHIVAMOGGA LIVE NEWS | 12 ಮಾರ್ಚ್ 2022
ಶಿವಮೊಗ್ಗದ ಕೋಟೆ ಶ್ರೀ ಮಾರಿಕಾಂಬ ದೇವಿ ಜಾತ್ರೆಗೆ ವಿದ್ಯುಕ್ತ ಚಾಲನೆ ಸಿಕ್ಕಿದೆ. ಗಾಂಧಿ ಬಜಾರ್’ನಲ್ಲಿ ಚಪ್ಪರ ಪೂಜೆ ನೆರವೇರಿದೆ. ಮಾರ್ಚ್ 22 ರಿಂದ 26ರವರೆಗೆ ಜಾತ್ರೆ ನಿಗದಿಯಾಗಿದ್ದು ಸಿದ್ಧತೆ ಕೂಡಲ ಭರದಿಂದ ಸಾಗಿದೆ.
ಈ ಭಾರಿ ಅತ್ಯಂತ ಸರಳವಾಗಿ ಜಾತ್ರೆ ನಡೆಸಲು ಕೋಟೆ ಮಾರಿಕಾಂಬ ದೇಗುಲ ಸಮಿತಿ ನಿರ್ಧಾರ ಮಾಡಿದೆ. ಆದರೆ ಸಂಪ್ರದಾಯ, ಪೂಜೆಗೆ ತೊಂದರೆ ಆಗದಂತೆ ನೋಡಿಕೊಳ್ಳಲಾಗಿದೆ. ಜಾತ್ರೆಯ ಯಾವೆಲ್ಲ ದಿನ ಏನು ನಡೆಯಲಿದೆ ಎಂಬುದರ ವಿವರ ಇಲ್ಲಿದೆ.
ಮಾರ್ಚ್ 22ರಂದು ಬೆಳಗ್ಗೆ 7ಕ್ಕೆ ಗಾಂಧಿ ಬಜಾರ್’ನಲ್ಲಿ ಅಮ್ಮನವರ ಪೂಜೆ ಆರಂಭವಾಗಲಿದೆ.
ಅಂದು ರಾತ್ರಿ ಗಾಂಧಿ ಬಜಾರ್’ನಿಂದ ಉತ್ಸವದೊಂದಿಗೆ ಮಾರಿಕಾಂಬಾ ದೇವಾಲಯದ ಗದ್ದುಗೆ ಪ್ರವೇಶಿಸಲಾಗುತ್ತದೆ.
ಮಾರ್ಚ್ 23ರಿಂದ ಮಾರ್ಚ್ 26ರವರೆಗೆ ಪ್ರತಿದಿನ ಬೆಳಗ್ಗೆ 7ರಿಂದ ಹರಕೆ, ಪೂಜೆ, ಪ್ರಸಾದ ವಿನಿಯೋಗ ನಡೆಯಲಿದೆ.
ಮಾರ್ಚ್ 25ರ ರಾತ್ರಿ 8 ಗಂಟೆಗೆ ಮಹಾ ಮಂಗಳಾರತಿ ನಡೆಯಲಿದೆ.
ಮಾರ್ಚ್ 26ರಂದು ರಾತ್ರಿ ಅಮ್ಮನವರ ರಾಜಬೀದಿ ಉತ್ಸವದೊಂದಿಗೆ ವನ ಪ್ರವೇಶ ನಡೆಯಲಿದ್ದು, ಜಾತ್ರೆ ಸಂಪನ್ನಗೊಳ್ಳಲಿದೆ.
ಇದನ್ನೂ ಓದಿ | ಕೋಟೆ ಶ್ರೀ ಮಾರಿಕಾಂಬ ದೇವಿ ಜಾತ್ರೆ, ಗಾಂಧಿ ಬಜಾರ್’ನಲ್ಲಿ ಇವತ್ತು ಚಪ್ಪರ ಪೂಜೆ
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – [email protected]
WhatsApp Number – 7411700200