ಶಿವಮೊಗ್ಗದಲ್ಲಿ ನಿಷೇಧಾಜ್ಞೆ, ವ್ಯಾಪಾರ, ವಹಿವಾಟಿಗೆ ಇಲ್ಲ ನಿರ್ಬಂಧ, ಹೇಗಿದೆ ನಗರದ ಪರಿಸ್ಥಿತಿ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 15 ಮಾರ್ಚ್ 2022

ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ವ್ಯಾಪಾರ, ವಾಹಿವಾಟು ಸಾಮಾನ್ಯ ದಿನದ ಹಾಗೆ ಇದೆ. ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ.

Shimoga Nanjappa Hospital

ಹಿಜಾಬ್ ಕುರಿತು ಹೈಕೋರ್ಟ್ ತೀರ್ಪು ಹಿನ್ನೆಲೆ ಶಿವಮೊಗ್ಗ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ವ್ಯಾಪಾರಿಗಳು, ಗ್ರಾಹಕರಿಗೆ ಇದರು ಆತಂಕ ಉಂಟು ಮಾಡಿತ್ತು.

ಸಹಜವಾಗಿದೆ ಶಿವಮೊಗ್ಗ

ಶಿವಮೊಗ್ಗದಲ್ಲಿ ವ್ಯಾಪಾರ, ವಹಿವಾಟಿಗೆ ಯಾವುದೆ ತೊಂದರೆ ಇಲ್ಲ. ಬೆಳಗ್ಗೆಯಿಂದಲು ಅಗತ್ಯ ವಸ್ತುಗಳ ಖರೀದಿಗೆ ಜನರು ಬರುತ್ತಿದ್ದಾರೆ. ಗಾಂಧಿ ಬಜಾರ್, ಬಿ.ಹೆಚ್.ರಸ್ತೆ, ನೆಹರೂ ರೋಡ್ ಸೇರಿದಂತೆ ಎಲ್ಲೆಡೆಯು ಅಂಗಡಿ ಮುಂಗಟ್ಟು ಬಾಗಿಲು ತೆಗೆಯಲಾಗಿದೆ.

ವಾಹನ ಸಂಚಾರ ಸಾಮಾನ್ಯ

ವಾಹನ ಸಂಚಾರವು ಸಮಾನ್ಯ ದಿನದ ಹಾಗೆ ಇದೆ. ಸರ್ಕಾರಿ ಮತ್ತು ಖಾಸಗಿ ಬಸ್ಸುಗಳ ಸಂಚಾರ ಸಹಜ ಸ್ಥಿತಿಯಲ್ಲಿದೆ. ಇನ್ನು, ಸಿಟಿ ಬಸ್ಸುಗಳು, ಆಟೋ, ಟ್ರಾಕ್ಸ್’ಗಳ ಸಂಚಾರವು ಎಂದಿನಂತೆಯೆ ಇದೆ.

ಬಂದೋಬಸ್ತ್ ಹೆಚ್ಚಳ

ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀಪ್ರಸಾದ್ ಅವರು, ‘ಶಿವಮೊಗ್ಗ ಜಿಲ್ಲೆಯಲ್ಲಿ ಎಲ್ಲೆಲ್ಲಿ ಅಗತ್ಯವಿದೆಯೋ ಅಲ್ಲೆಲ್ಲ ಬಂದೋಬಸ್ತ್ ಹೆಚ್ಚಳ ಮಾಡಲಾಗಿದೆ. ಶಿವಮೊಗ್ಗ ನಗರದ ತುಂಗಾ ನಗರ, ಕೋಟೆ ಮತ್ತು ದೊಡ್ಡಪೇಟೆ ಠಾಣೆ ವ್ಯಾಪ್ತಿಯಲ್ಲಿ ಹೆಚ್ಚು ಬಂದೋಬಸ್ತ್ ಕೈಗೊಳ್ಳಲಾಗಿದೆ. ಈ ಭಾಗದ ಎಲ್ಲಾ ನಾಯಕರನ್ನು ಕರೆಯಿಸಿ ಮಾತನಾಡಿದ್ದೇವೆ’ ಎಂದು ತಿಳಿಸಿದರು.

ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ

ಈ ಮೇಲ್ – shivamoggalive@gmail.com

WhatsApp Number – 7411700200

JNNCE VTU ranking

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment