ಶಿವಮೊಗ್ಗದ ಬಾರ್’ನಲ್ಲಿ ಬಿಯರ್ ಬಾಟಲಿಯಿಂದ ವ್ಯಕ್ತಿಯ ತಲೆಗೆ ಹೊಡೆದ ಅಪರಿಚಿತ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 20 ಮಾರ್ಚ್ 2022

ಕ್ಷುಲಕ ವಿಚಾರಕ್ಕೆ ಬಿಯರ್ ಬಾಟಲಿಯಿಂದ ವ್ಯಕ್ತಿಯೊಬ್ಬರ ತಲೆಗೆ ಹೊಡೆಯಲಾಗಿದೆ. ಶಿವಮೊಗ್ಗ ನಗರದ ಸವರ್ ಲೈನ್ ರಸ್ತೆಯ ಬಾರ್ ಒಂದರದಲ್ಲಿ ಘಟನೆ ಸಂಭವಿಸಿದೆ.

Shimoga Nanjappa Hospital

ವೇಣುಗೋಪಾಲ (57) ಅವರ ತಲೆಗೆ ಬಿಯರ್ ಬಾಟಲಿಯಿಂದ ಹೊಡೆದು ಹಲ್ಲೆ ನಡೆಸಲಾಗಿದೆ. ಸ್ನೇಹಿತರೊಬ್ಬರ ಜೊತೆಗೆ ವೇಣುಗೋಪಾಲ ಅವರು ಸವರ್ ಲೈನ್ ರಸ್ತೆಯಲ್ಲಿರುವ ಬಾರ್ ಒಂದಕ್ಕೆ ತೆರಳಿದ್ದರು.

ಬಾರ್’ನಲ್ಲಿ ವೇಣುಗೋಪಾಲ ಅವರು ಕುಳಿತಿದ್ದ ಟೇಬಲ್ ಬಳಿ ಬಂದ ಅಪರಿಚಿತನೊಬ್ಬ ಹೊರಗೆ ಹೋಗು ಎಂದು ತಿಳಿಸಿದ್ದಾನೆ. ಯಾಕೆ ಎಂದು ಪ್ರಶ್ನಿಸಿದಾಗ ಅಲ್ಲೆ ಇದ್ದ ಬಿಯರ್ ಬಾಟಲಿ ತೆಗೆದುಕೊಂಡು ವೇಣುಗೋಪಾಲ ಅವರ ತಲೆಗೆ ಹೊಡೆದಿದ್ದಾನೆ ಎಂದು ಆರೋಪಿಸಲಾಗಿದೆ.

ಗಾಯಗೊಂಡಿದ್ದ ವೇಣುಗೋಪಾಲ ಅವರನ್ನು ಕೂಡಲೆ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಯಿತು. ಘಟನೆ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ

ಈ ಮೇಲ್ – shivamoggalive@gmail.com

WhatsApp Number – 7411700200

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment